ಕಲಬುರ್ಗಿ : ಸ್ನೇಹಿತರೆಂದರೆ ಕಷ್ಟಕಾಲದಲ್ಲಿ ಕೈ ಬಿಡದೆ ಜೊತೆಯಲ್ಲಿ ಇರುವವರು ಅಂತ ಹೇಳುತ್ತಾರೆ ಆದರೆ ಇನ್ನೊಬ್ಬ ಸ್ನೇಹಿತ ತನ್ನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಕುತ್ತಿಗೆಗೆ ವೈರ್ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮುರುಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಅಂಬರೀಶ್ (28) ಸ್ನೇಹಿತನಿಂದಲೇ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ಅಜಯ್ ಹಾಗೂ ಆತನ ಸ್ನೇಹಿತರು ಕೊಲೆ ಮಾಡಿರುವ ಆರೋಪಿಗಳು. ಅಜಯ್ ಪತ್ನಿ ಜೊತೆ ಅಂಬರೀಶ್ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಅಜಯ್ ತನ್ನ ಹೆಂಡತಿ ಜೊತೆ ಇರುವಂತೆ ಹೇಳಿ ಕಲಬುರಗಿಯಿಂದ ಬೆಂಗಳೂರಿಗೆ (Bengaluru) ಹೋಗಿ ಅಂಬರೀಶ್‌ನನ್ನ ಕರೆತಂದಿದ್ದ. ಅಂಬರೀಶ್‌ನನ್ನು ಮುರಡಿ ಗ್ರಾಮಕ್ಕೆ ಕರೆತಂದ ಅಜಯ್, ಆತನ ಸ್ನೇಹಿತರ ಜೊತೆ ಸೇರಿ ವಯರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವ ಕುರಿತು ಮಾಹಿತಿ ನೀಡಿದು ಅಲ್ಲದೆ, ತಾನೇ ಠಾಣೆಗೆ ಹೋಗಿ ಶರಣಾಗಿದ್ದು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.