ಕಲಬುರಗಿ : ಕಲಬುರ್ಗಿಯಲ್ಲಿ ಭೀಕರ ಕೊಲೆಯಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಗಂಡನನ್ನೆ ಪತ್ನಿ ಹಾಗೂ ಆಕೆಯ ಪ್ರೀಯಕರ ಸೇರಿ ಕೊಲೆಗೈದಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಗೋಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಕಬ್ಬಲಿಗ ಸಮಾಜದ ತಿಪ್ಪಣ್ಣ ಕುಪೇಂದ್ರ (30) ಎಂದು ತಿಳಿದುಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಶಾಂತಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ತಿಪ್ಪಣ್ಣ ಕುಪೇಂದ್ರ ಎನ್ನುವವರನ್ನು ತಲೆದಿಂಬ್ಬಿಂದ ಮುಖವನ್ನು ಮುಚ್ಚಿ ಉಸಿರು ಗಟ್ಟಿಸಿ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ತಲೆ ದಿಂಬಿನಿಂದ ಮುಖವನ್ನು ಮುಚ್ಚಿ ಉಸಿರು ಗಟ್ಟಿಸುತ್ತಿರುವಾಗ ತಿಪ್ಪಣ್ಣ ಜೋರಾಗಿ ಕಿರುಚಿದ್ದು ಅಕ್ಕ ಪಕ್ಕದವರು ಬಂದು ಮನೆಯ ಬಾಗಿಲು ಬಡಿದಾಗ ಯಾರೂ ಮನೆಯ ಬಾಗಿಲು ತೆರೆಯಲಿಲ್ಲ ಇದರಿಂದ ಅನುಮಾನಗೊಂಡು 112 ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದಾಗ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಇತ್ತ ಪೊಲೀಸರು ಬರುವ ವಿಚಾರ ಗೊತ್ತಾಗುತ್ತಿದ್ದಂತೆ ಪ್ರಿಯಕರ ಅಟ್ಟದ ಮೇಲೆ ಹೋಗಿ ಅಲ್ಲಿನ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದಾನೆ. ಶಾಂತಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಿಯಕರ ಪರಾರಿಯಾಗಿದ್ದು, ಆತನನ್ನು ಕೂಡಲೇ ಬಂಧಿಸಲಾಗುವುದು ಎಂದು ಪಿಎಸ್’ಐ ಶ್ರೀಶೈಲ್ ಅಂಬಾಟಿ ಅವರು ಮಾಹಿತಿ ನೀಡಿದರು.