ಹಾಸನ : ಹಾಸನದಲ್ಲಿ ಭೀಕರ ಕೊಲೆಯಾಗಿದ್ದು, ಲವ್ ಬ್ರೇಕಪ್ ಸಂಬಂಧ ಪ್ರೇಮಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ಸಂದೀಪ್ (24) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಹೊಳೆನರಸೀಪುರ ತಾಲೂಕಿನ ಎಸ್.ಅಂಕನಹಳ್ಳಿ ಬಳಿ ಮೃತದೇಹ ಪತ್ತೆಯಾಗಿದೆ. 3 ವರ್ಷಗಳಿಂದ ಮೈಸೂರು ಜಿಲ್ಲೆಯ ಯುವತಿಯನ್ನು ಪ್ರೀತಿಸುತ್ತಿದ್ದ. ಲವ್ ಬ್ರೇಕಪ್ ಹಿನ್ನೆಲೆ ಹುಡುಗಿ ಕಡೆಯವರಿಂದ ಕೊಲೆ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ಮನೆಯಿಂದ ಬೈಕ್ ನಲ್ಲಿ ತೆರಳಿದ್ದ ಸುದೀಪ್ ಶವವಾಗಿ ಪತ್ತೆಯಾಗಿದ್ದಾನೆ.
ಮಚ್ಚಿನಿಂದ ಕೊಚ್ಚಿ ಕೊಲೆಗೈದು ಅಪಘಾತದ ರೀತಿ ಬಿಂಬಿಸುವ ಯತ್ನಿಸಲಾಗಿದೆ. ಕೊಲೆ ಮಾಡಿ ಶವ ಬೈಕ್ ನ್ನು ಮುಚ್ಚಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.