ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದ್ದು ಚಾಕುವಿನಿಂದ ಇರಿದು ಪತಿಯಿಂದಲೇ ಪತ್ನಿಯ ಭೀಕರ ಕೊಲೆ ಆಗಿದೆ. ಕೊಲೆಯ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್ ನಲ್ಲಿ ಈ ಒಂದು ಕೊಲೆ ನಡೆದಿದೆ.
ಚಾಕುವಿನ ಇರಿದು ಪತ್ನಿ ಆಯಾಶಾ ಸಿದ್ದಿಕಿ (39) ಯನ್ನು ಪತಿ ಸೈಯದ್ ಕೊಲೆ ಮಾಡಿದ್ದಾನೆ. ಪತಿಯಿಂದ ಕೊಲೆಯಾದ ಆಯೇಷಾ ಸಿದ್ಧಿಕಿಗೆ ಸೈಯದ್ ಜಬಿ ಮೂರನೆ ಪತಿಯಾಗಿದ್ದಾನೆ. ಆರೋಪಿ ಸೈಯದ್ ಜಬಿಗೆ ಎರಡನೇ ಪತ್ನಿ ಆಗಿರುವ ಆಯೇಷಾ ಸಿದ್ದಿಕಿ ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದರು. ಪಾರ್ಲರ್ ಕೆಲಸ ಬಿಡುವಂತೆ ಪತಿ ಸೈಯದ್ ಹೇಳಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ನೆನ್ನೆ ರಾತ್ರಿ ಗಲಾಟೆ ವಿಕೋಪಕ್ಕೆ ತಿರುಗಿ ಸಯ್ಯದ್ ಪತ್ನಿಯನ್ನು ಚಾಕುವಿನಿಂದ ಹಿಡಿದು ಕೊಲೆ ಮಾಡಿದ್ದಾನೆ ಸಂಪಗೆ ಹೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








