ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ವೈರ್ ನಿಂದ ಕುತ್ತಿಗೆ ಬಿದ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ, ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿ ಬಳಿ ನಡೆದಿದೆ.
ಹತ್ಯೆಯಾದ ಪ್ರಿಯತಮೇಯನ್ನ ಕೊಡಗು ಮೂಲದ ರಂಜಿತಾ (24) ಎಂದು ತಿಳಿದು ಬಂದಿದೆ , ಆರೋಪಿ ಅಯ್ಯಪ್ಪನನ್ನು ವರ್ತೂರು ಠಾಣೆ ಪೋಲೀಸರು ಇದೀಗ ಅರೆಸ್ಟ್ ಮಾಡಿ ವಿಚಾರಣೆ ಒಳಪಡಿಸಿದ್ದಾರೆ. ರಂಜಿತ ಮತ್ತು ಅಯ್ಯಪ್ಪ ಕೊಡಗು ಜಿಲ್ಲೆಯ ನಿವಾಸಿಗಳಾಗಿದ್ದು, ಮದುವೆಯಾಗಿ ಹೆಂಡತಿಯನ್ನು ಅಯ್ಯಪ್ಪ ಬಿಟ್ಟಿದ್ದ. ಡ್ರೈ ಫ್ರೂಟ್ ಅಂಗಡಿಯಲ್ಲಿ ಆರೋಪಿ ಅಯ್ಯಪ್ಪ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ.
ಇನ್ನು ಅಯ್ಯಪ್ಪನನ್ನೆ ಮದುವೆಯಾಗುವುದಾಗಿ ರಂಜಿತ ಮನೆ ಬಿಟ್ಟು ಬಂದಿದ್ದಾಳೆ. ಪತ್ನಿಗೆ ವಿಚ್ಛೇದನ ನೀಡದೆ ಅಯ್ಯಪ್ಪ ರಂಜಿತಾ ಜೊತೆಗೆ ವಾಸವಿದ್ದ. ಇದೀಗ ಮದುವೆ ವಿಚಾರಕ್ಕೆ ರಂಜಿತ ಹಾಗೂ ಅಯ್ಯಪ್ಪನ ನಡುವೆ ಜಗಳ ನಡೆದಿದೆ. ಜಗಳವಿಕೋಪಕ್ಕೆ ಹೋಗಿ ಅಯ್ಯಪ್ಪ ರಂಜಿತಾಳ ಕುತ್ತಿಗೆಗೆ ವೈರ್ಮಿತ ಬಿಗಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಸದ್ಯ ಆರೋಪಿಯನ್ನು ವರ್ತೂರು ಠಾಣೆ ಪೋಲಿಸರು ಅರೆಸ್ಟ್ ಮಾಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.








