ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆಯಾಗಿದ್ದು, ತಾಯಿಗೆ ಬೈಯ್ದಿದ್ದಕ್ಕೆ ಸ್ವಂತ ಅಣ್ಣನನ್ನೇ ತಮ್ಮನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಾರಬ್ ನಗರದಲ್ಲಿ ನಡೆದಿದೆ. ಮಹಮ್ಮದ್ ಮುಜಾಹಿದ್ (35) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಮುಜಾಹೀದ್ ತಮ್ಮ ಮೊಹಮ್ಮದ್ ಮುಸೆದ್ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ತಾಯಿಗೆ ಬೈದ ಎನ್ನುವ ವಿಚಾರಕ್ಕೆ ಅಣ್ಣತಮ್ಮ ನಡುವೆ ಹೊಡೆದಾಟ ಆಗಿದೆ.ಮನೆಯಲ್ಲಿ ಇದ್ದಂತಹ ವಸ್ತುಗಳಿಂದ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಮುಜಾಹಿದ್ನನ್ನು ಮುಸೆದ್ ಹತ್ಯೆಗೈದಿದ್ದಾನೆ. ಗಾಯಗೊಂಡ ಮುಸೆದ್ ನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








