ಮಂಡ್ಯ : ಮಂಡ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಅನಾಥಶ್ರಮದಲ್ಲಿ ಪುಡ್ ಪಾಯಿಸನ್ ನಿಂದಾಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ಕೇರ್ಲಾಂಗ್ (13) ಮೃತ ಬಾಲಕ. ಫುಡ್ ಪಾಯ್ಸನ್ ನಿಂದಾಗಿ ಅನಾಥಾಶ್ರಮದ ಹಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಮಕ್ಕಳನ್ನು ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಳವಳ್ಳಿಯಲ್ಲಿ ಉದ್ಯಮಿಯೊಬ್ಬರು ಹೋಳಿ ಹಬ್ಬ ಆಚರಿಸಿದ್ದರು. ಈ ವೇಳೆ ಉಳಿದ ಊಟವನ್ನು ಅನಾಥಾಶ್ರಮಕ್ಕೆ ನೀಡಿದ್ದರು. ಈ ಊಟ ಸೇವಿಸಿ ಫುಡ್ ಪಾಯ್ಸನ್ ಆಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಊಟ ಸೇವಿಸಿದ್ದ ಹಲವರು ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.