ಹುಬ್ಬಳ್ಳಿ : ಹುಬ್ಬಳ್ಳಿ ನಗರದ ವೀರ ಮಾರುತಿ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಯ್ಯಪ್ಪ ಮಾಲಾಧಾರಿಗಳಿದ್ದ ಶೆಡ್ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ಪೂಜೆ ಮಾಡಿ ದೀಪ ಹಚ್ಚಿ ಮಾಲಾಧಾರಿಗಳು ಹೊರಗಡೆ ಹೋಗಿದ್ದಾರೆ ಈ ವೇಳೆ ದೀಪದಿಂದ ಇಡೀ ಮನೆ ಹೊತ್ತಿ ಉರಿದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಲ್ಲಿ ಯಶಸ್ವಿ ಆಗಿದ್ದಾರೆ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








