ಚಿಕ್ಕಬಳ್ಳಾಪುರ : ಬೆಳ್ಳಂಬೆಳಗ್ಗೆ ರಾಜ್ಯದಲ್ಲಿ ಭೀಕರ ಹಬ್ಬದ ಸಂಭವಿಸಿದ್ದು, ಮಂತ್ರಾಲಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಒಂದು ಅಪಘಾತಕ್ಕೆ ಈಡಾಗಿದೆ. ಟ್ರಕ್ಕಿಗೆ ಖಾಸಗಿ ಸ್ಲಿಪ್ಪರ್ ಬಸ್ ಒಂದು ಡಿಕ್ಕಿ ಹೊಡೆಡಿದೆ. ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದ ಬಳಿ ಈ ಒಂದು ಭೀಕರ ಬಘಾತ ಸಂಭವಿಸಿದ್ದು. 11 ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿವೆ.
ಬಸ್ನೊಳಗೆ ಸಿಲುಕಿದ್ದ ಶಿವಪ್ಪ ಎಂಬಾತನನ್ನು ತಕ್ಷಣ ರಕ್ಷಿಸಲಾಗಿದೆ. ಬಸ್ ಕ್ಲೀನರ್ ಸೇರಿದಂತೆ ಇಬ್ಬರಿಗೆ ಗಂಭೀರವಾದ ಗಾಯಳಾಗಿದ್ದು, ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನಿಂದ ಮಂತ್ರಾಲಯಕ್ಕೆ ಬಸ್ ತೆರಳುತ್ತಿತ್ತು. ಸುಗಮ ಸಂಸ್ಥೆಯ ಬಸ್ ಅಪಘಾತ ಆಗಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








