ರಾಯಚೂರು : ರಾಯಚೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ನಾಲ್ವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಯಚೂರು ಹೊರವಲಯದ ಮನ್ಸಲಾಪುರ ಕ್ರಾಸ್ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಉಡುಪಿಯಿಂದ ಕಾರಿನಲ್ಲಿ ಕುಟುಂಬ ಒಂದು ಹೈದರಾಬಾದ್ ಗೆ ತೆರಳುತ್ತಿತ್ತು.
ಈ ವೇಳೆ ಅತಿ ವೇಗ ಹಿನ್ನೆಲೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಹಾಜೀರ (65) ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಇಶಾನ್ ಅಬ್ದುಲ್, ಇಲಾನ್ ಇಸ್ಮಾಯಿಲ್ ಮೊಹಮ್ಮದ್ ಇಜಾನ್ ಹಾಗು ಮೊಹಮ್ಮದ್ ಇಮ್ರಾನ್ಗೆ ಗಂಭೀರವಾದ ಗಾಯಗಳಾಗಿವೆ. ಇವರೆಲ್ಲರೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟ್ರೇಶ್ವರ ನಿವಾಸಿಗಳು ಎನ್ನಲಾಗಿದ್ದು, ಗಾಯಾಳುಗಳಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.