ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ ರೈತ ಸಾವನಪ್ಪಿದ್ದಾನೆ. ಸಾಗ್ಯ ಗ್ರಾಮದಲ್ಲಿ ರೈತರ (38) ದುರ್ಮರಣ ಹೊಂದಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಜಮೀನುನಲ್ಲಿ ವಿದ್ಯುತ್ ತಂತಿಗೆ ತೆಂಗಿನ ಗರಿಗಳು ತಾಗಿವೆ. ತೆಂಗಿನ ಗರಿಗಳನ್ನು ಜಮೀನಿನಿಂದ ಹೊರ ಹಾಕುವಾಗ ಈ ಒಂದು ದುರಂತ ಸಂಭವಿಸಿದೆ. ಘಟನೆ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
		







