ಗದಗ : ಗದಗದಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರವಾದ ಅಪಘಾತ ಸಂಭವಿಸಿದೆ.ಕಾರು ಗುದ್ದಿದ ರಭಸಕ್ಕೆ ಇಬ್ಬರು ಬೈಕ್ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ರಸ್ತೆ ಬದಿಯ ಗಿಡಗಂಟಿಗಳ ಮಧ್ಯೆ ಬಿದ್ದಿದ್ದಾರೆ.
ಈ ವೇಳೆ ಕಾರು ರಸ್ತೆ ಬದಿರುವ ಬೇಲಿ ಒಳಗೆ ನುಗ್ಗಿದೆ. ಗದಗದ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿಯಲ್ಲಿ ಈ ಒಂದು ಅಪಘಾದ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇನ್ನು ಕಾರಲ್ಲಿರುವ ಮೂವರು ಮತ್ತು ಬೈಕ್ ನಲ್ಲಿ ಇರುವ ಇಬ್ಬರು ಸವಾರರಿಗೆ ಗಂಭೀರವಾದ ಗಾಯಗಳಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








