ಧಾರವಾಡ : ಹೈಟೆನ್ಷನ್ ವಿದ್ಯುತ್ ವೈರ್ ಸ್ಪರ್ಶದಿಂದ ಇದೀಗ ಯುವಕ ಸಾವನಪ್ಪಿದ್ದಾನೆ. ಲಾರಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಯಂತ್ರ ಸಾಗಣೆ ವೇಳೆ ಈ ಒಂದು ಘಟನೆ ನಡೆದಿದೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಈ ಒಂದು ಘಟನೆ ಸಂಭವಿಸಿದೆ. ಮೃಣಾಲ್ ಸಕ್ಕರೆ ಕಾರ್ಖಾನೆಗೆ ಯಂತ್ರ ತರುತ್ತಿದ್ದಾಗ ಘಟನೆ ಸಂಭವಿಸಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಮಾಲಿಕತ್ವದ ಮೃಣಾಲ್ ಸಕ್ಕರೆ ಕಾರ್ಖಾನೆ , ಬುಡಕಲಕಟ್ಟಿ ಗ್ರಾಮದ ಬಳಿ ಇರುವ ಮೃಣಾಲ್ ಶುಗರ್ ಕಾರ್ಖಾನೆಗೆ ನಂದಗಡದಿಂದ ಲಾರಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಯಂತ್ರ ಸಾಗಣೆ ಮಾಡಲಾಗುತ್ತಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಿಂದ ಯಂತ್ರ ಸಾಗಣೆ ಮಾಡುತ್ತಿದ್ದ ಲಾರಿಗೆ ಹೈ ಟೆನ್ಷನ್ ವಿದ್ಯುತ್ ತಾಗಿದೆ. ವಿದ್ಯುತ್ ವೈರ್ ಮೇಲೆ ಯುವಕ ಸಾವನಪ್ಪಿದ್ದಾನೆ. ವಿದ್ಯುತ್ ಪ್ರವಹಿಸಿ ಧಾರವಾಡ ಜಿಲ್ಲೆಯ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








