ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಮೀನಿಗೆ ಬಲೆ ಹಾಕಲು ಹೋಗಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನಪ್ಪಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟದ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ಆನಂದ (32) ಹಾಗೂ ಅನಂತ (27) ಮೃತರು ಎಂದು ತಿಳಿದು ಬಂದಿದೆ.
ಮೀನಿಗೆ ಬಲೆ ಹಾಕಲು ಇಬ್ಬರು ತೆಪ್ಪದಲ್ಲಿ ಕೆರೆಯ ಮಧ್ಯೆ ತೆರಳಿದ್ದಾರೆ. ಕೆರೆಯ ಮಧ್ಯದಲ್ಲಿ ತೆಪ್ಪದ ಹುಟ್ಟು ಕೈ ತಪ್ಪಿ ಕೆರೆಗೆ ಬಿದ್ದಿತ್ತು. ಈ ವೇಳೆ ಆನಂದ ನೀರಿಗೆ ಧುಮುಕಿ ತೆಪ್ಪವನ್ನು ಹಿಡಿದುಕೊಂಡಿದ್ದ. ಆನಂದ ನನ್ನ ಮೇಲೆ ಎತ್ತಲು ಅನಂತ ಸಹ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆನಂದ್ ಮತ್ತು ಅನಂತ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.