ಬೆಂಗಳೂರು : ಬೆಂಗಳೂರಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆಯ ಮೇಲೆ ಕ್ರೇನ್ ಟವರ್ ಬಿದ್ದು ಭಾರೀ ಅನಾಹುತ ಒಂದು ಸಂಭವಿಸಿದೆ. ಮನೆಯ ಮೇಲೆ ಬಿದ್ದ ಕ್ರೇನ್ ಟವರ್ ನಿಂದ ಒಬ್ಬನ ಸ್ಥಿತಿ ಗಂಭೀರವಾಗಿದ್ದು ಘಟನೆಯಲ್ಲಿ ಮನೆಯಲ್ಲಿದ್ದ ಐವರಿಗೆ ಕೆಆರ್ ಪುರಂ ನಲ್ಲಿ ಬೃಹತ್ ಕ್ರೇನ್ ಒಂದು ಕುಸಿದು ಬಿದ್ದಿದೆ.
ಕ್ರೇನ್ ರಿಪೇರಿ ಮಾಡಲು ಬಳಸುವ ಲ್ಯಾಡರ್ ಗಳು ಕುಸಿತವಾಗಿವೆ, ಮೆಡಹಳ್ಳಿ ಬಡಾವಣೆಯಲ್ಲಿ ಮಧ್ಯಾಹ್ನ ಈ ಒಂದು ಘಟನೆ ನಡೆದಿದ್ದು ಬಾಡಿಗೆ ಮನೆಯಲ್ಲಿ ನೆಲೆಸಿದ ಇವರಿಗೆ ಗಂಭೀರವಾದ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.ಸದ್ಯಕ್ಕೆ ಅವಲಹಳ್ಳಿ ಠಾಣೆ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ