ಬೆಂಗಳೂರು : ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನದಂದೆ ಭೀಕರವಾದ ಅಪಘಾತ ಸಂಭವಿಸಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ನವವಿವಾಹಿತೆ ದಾರುಣವಾಗಿ ಸಾವನಪ್ಪಿದ್ದಾಳೆ. ಅಮ್ಮನ ಮನೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದಿದ್ದವಳು ಇದೀಗ ಸಾವಿನ ಮನೆ ಸೇರಿದ್ದಾಳೆ.
ಹೌದು ಬೆಂಗಳೂರಿನಲ್ಲಿ ಅಪಘಾತಕ್ಕೆ ಗೀತಾ (23) ಎನ್ನುವ ಮಹಿಳೆ ಸಾವನಪ್ಪಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ನವಾವಿವಾಹಿತೆ ದಾರುಣವಾಗಿ ಸಾವನಪ್ಪಿದ್ದಾಳೆ . ಪತಿಯ ಜೊತೆ ಬೈಕಿನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ ಬೆಂಗಳೂರಿನ ಲಗ್ಗೆರೆ ಬಳಿ ಹೋಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಿಂದ ತಲೆಯಲ್ಲಿ ತೀವ್ರ ರಕ್ತ ಸಾವ್ರವಾಗಿ ಸಾವನಪ್ಪಿದ್ದಾಳೆ.
ಈ ವೇಳೆ ಪತ್ನಿಯ ದೇಹ ತೊಡೆ ಮೇಲೆ ಇರಿಸಿಕೊಂಡು ಪತಿ ಆಕ್ರಂದನ ಮುಗಿಲು ಮುಟ್ಟಿದ್ದು ನೋಡುಗರ ಮನಕಲಕುವಂತಿತ್ತು. ಎರಡು ತಿಂಗಳ ಹಿಂದಷ್ಟೇ ಗೀತಾ ಮತ್ತು ಸುನಿಲ್ ವಿವಾಹವಾಗಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ತಾಯಿ ಮನೆಗೆ ಗೀತಾ ನಿನ್ನೆ ಬಂದಿದ್ದರು ಮನೆಗೆ ನವದಂಪತಿಗಳು ಆಗಮಿಸಿದ್ದಾರೆ. ಈ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗೀತಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಈ ವೇಳೆ ಪತಿಯೇ ಶವವನ್ನು ಇಟ್ಟುಕೊಂಡು ಪತಿ ಸುನಿಲ್ ಗೋಳಾಡುತ್ತಿರುವುದು ಮನ ಕಲಕುವಂತಿತ್ತು.