ಬೆಂಗಳೂರು : ಬೆಂಗಳೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ರಾಮನಗರದ ಬಿಡದಿಯಲ್ಲಿ ಲಾರಿ ಹರಿದು ಶಾಲಾ ವಿದ್ಯಾರ್ಥಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ.
ಶಾಲೆಗೆ ಹೋಗುತ್ತಿದ್ದಾಗ ಲಾರಿ ಹರಿದು ವಿಜಯ್ (13) ಎಂಬ ಶಾಲಾ ವಿದ್ಯಾರ್ಥಿ ಸಾವನಪ್ಪಿದ್ದಾನೆ. ಬಿಲ್ಲೆಕೆಂಪನಹಳ್ಳಿ ಬಳಿ ಹಾವೇರಿ ಮೂಲದ ಕುಟುಂಬ ವಾಸವಿತ್ತು.ಇಂದು ವಿಜಯ್ ರಸ್ತೆ ಬದಿ ಹೋಗುತ್ತಿದ್ದಾಗ ಲಾರಿ ಹರಿದು ಸ್ಥಳದಲ್ಲೇ ಸಾವನಪ್ಪಿದ್ದಾನೆ ಘಟನಾ ಸ್ಥಳಕ್ಕೆ ಪೊಲೀಸರು ಬಿಟ್ಟು ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








