ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಮಾದನಾಯಕನಹಳ್ಳಿ ಬಳಿ ಲಾರಿಗೆ ಸಿಲುಕಿ ತಂದೆ ತಾಯಿಯ ಎದುರೇ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ ನಾಲ್ಕು ವರ್ಷದ ಬಾಲಕಿ ನಿಶಿಕ ಸಾವನಪ್ಪಿದ್ದಾಳೆ.
ತಂದೆ ತಾಯಿ ಎದುರುಗಡೆನೇ ನಾಲ್ಕು ವರ್ಷದ ಬಾಲಕಿ ನಿಷಿಕಾ ಸಾವನಪ್ಪಿದ್ದಾಳೆ. ಕೈ ಹಿಡಿದುಕೊಂಡು ರಸ್ತೆಯಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇನ್ನೊಂದು ಮಗು ಕಂಕಗಳಲ್ಲಿ ಇಟ್ಟುಕೊಂಡಿರುತ್ತಾರೆ. ನೋಡು ನೋಡುತ್ತಿದ್ದಂತೆ ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮೊದಲ ಮಗಳು ಲಾರಿ ಸಿಲುಕಿ ಸಾವನಪ್ಪಿದ್ದಾಳೆ. ತಾಯಿಯ ಜೊತೆಗೆ ದೇವಸ್ಥಾನಕ್ಕೆ ಬಾಲಕಿ ತೆರಳುತ್ತಿದ್ದ ವೇಳೆ ಈ ಒಂದು ಘಟನೆ ನಡೆದಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.








