ಬಳ್ಳಾರಿ : ಬಳ್ಳಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿ ಇದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ಸರಕಾರಿ ಕಾಲೇಜು ಬಳಿ ನಡೆದಿದೆ.
ಮೃತರನ್ನು ಸವಾರರಾದ ಅಭಿ (18) ಹಾಗು ಹಿಂಬದಿ ಕುಳಿತಿದ್ದ ಶಿವಲಿಂಗಮ್ಮ (18) ಸಾವನಪ್ಪಿದ್ದಾರೆ. ಮೃತ ಶಿವಲಿಂಗಮ್ಮ ಬಿಎ ಓದುತ್ತಿದ್ದೂ, ಇನ್ನು ಅಭಿ ಡಿಪ್ಲೋಮ ವ್ಯಾಸಂಗ ಮಾಡುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








