ಬಾಗಲಕೋಟೆ : ಬಾಗಲಕೋಟೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಪಾದಚಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡದಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಓರ್ವ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಗಣಪತಿ ಬತ್ತಿ (32) ಹಾಗೂ ತಾಪಸ್ ಕುಮಾರ್ (46) ಎಂದು ತಿಳಿದುಬಂದಿದ್ದು ಪೊಲೀಸರು ಮೃತ ಪಾದಚಾರಿ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಕಾರು ಚಾಲಕ ಸುಭಾಷ್ ರಾಮತೀರ್ಥಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








