ರಾಯಚೂರು : ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಸರ್ಕಾರಿ ಬಸ್ ಮತ್ತು ಟ್ಯಾಕ್ಟರ್ ಡಿಕ್ಕಿಯಾಗಿ ನಾಲ್ವರು ಕಾಲು ಮುರಿತವಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಮಲ ಬಳಿ ಒಂದು ಭೀಕರ ಅಪಘಾತ ಸಂಭವಿಸಿದೆ.
ಬಸ್ಸಿನ ಕಿಟಕಿ ಬಳಿ ಕುಳಿತಿದ್ದ ನಾಲ್ವರು ಪ್ರಯಾಣಿಕರ ಕಾಲು ಮುರಿತವಾಗಿದೆ. ನರಸಮ್ಮ(50) ಲಕ್ಷ್ಮಿ (55) ಹುಸೇನ್ (54) ಕಲಂದರ್ (4) ಗೆ ಗಂಭೀರವಾದ ಗಾಯಗಳಾಗಿದ್ದು ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಯಚೂರಿನಿಂದ ಸರ್ಕಾರಿ ಬಸ್ ಲಿಂಗಸುಗೂರು ಕಡೆಗೆ ತೆರಳುತ್ತಿತ್ತು. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.