ಬೆಳಗಾವಿ : ಇತ್ತೀಚಿಗೆ ಪಿಎಸ್ಐ ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು, ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ವಿಳಂಬವಾಗಿರುವ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಪಿಎಸ್ಐ ಆಯ್ಕೆಯಾದವರಿಗೆ ನೇಮಕಾತಿ ಪತ್ರ ವಿಳಂಬವಾಗಿರುವ ವಿಚಾರವಾಗಿ ಅಧಿವೇಶನದ ಬಳಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 565 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆದಿತ್ತು. ಮರು ಪರೀಕ್ಷೆ ಮಾಡಿ ಈಗ ವೆರಿಫಿಕೇಶನ್ ಮಾಡಲಾಗುತ್ತಿದೆ.ಅಧಿವೇಶನದ ಬಳಿಕ ಆಯ್ಕೆಯಾದವರಿಗೆ ಆದೇಶ ಪತ್ರ ನೀಡುತ್ತೇವೆ. ಅಲ್ಲದೇ ಹೊಸದಾಗಿ ಇನ್ನು 402 ಪಿ.ಎಸ್.ಐ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.