ಪಶ್ಚಿಮ ಬಂಗಾಳ : ಚೀನಾದಲ್ಲಿ ಅಬ್ಬರಿಸುತ್ತಿರುವ ಮಾರಕ ಎಚ್ ಎಂ ಪಿ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ.ಇಂದು ಬೆಂಗಳೂರಿನ 8 ವರ್ಷದ ಹಾಗೂ 3 ವರ್ಷದ ಮಗುವಿನಲ್ಲಿ ಈ ಒಂದು ವೈರಸ್ ಪತ್ತೆಯಾಗಿತ್ತು. ಬಳಿಕ ಗುಜರಾತ್ ಈ ಒಂದು ವೈರಸ್ ಪಟ್ಟೆಯಾಗಿದ್ದು, ಇದೀಗ ಕೊಲ್ಕತ್ತಾದಲ್ಲಿ 5 ವರ್ಷದ ಮಗುವಿನಲ್ಲಿ ಈ ಒಂದು ವೈರಸ್ ಪತ್ತೆಯಾಗಿದೆ.
ಹೌದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲೂ ಎಚ್ ಎಂ ಪಿ ವೈರಸ್ ಇದೀಗ ಪತ್ತೆಯಾಗಿದೆ. ಐದು ತಿಂಗಳ ಮಗುವಿನಲ್ಲಿ ಎಚ್ಎಂಪಿ ವೈರಸ್ ಪತ್ತೆಯಾಗಿದೆ. ನವೆಂಬರ್ 12ರಂದು ಐದು ತಿಂಗಳ ಮಗು ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಮಗುವಿನಲ್ಲಿ ಎಚ್ ಎಂ ಪಿ ವೈರಸ್ ಪತ್ತೆಯಾಗಿದೆ.
ಇದಕ್ಕೂ ಮುನ್ನ ಗುಜರಾತ್’ನ ಅಹಮದಾಬಾದ್ ನಲ್ಲಿ 2 ತಿಂಗಳ ಮಗುವಿಗೆ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಲ್ಲಿ ಇಬ್ಬರು ಹಸುಗೂಸುಗಳು ಹಾಗೂ ಗುಜರಾತ್ ನಲ್ಲಿ ಓರ್ವ ಹಸುಗೂಸಿಗೆ ಸೋಂಕು ತಗುಲಿರುವುದು ಧೃಡವಾಗಿದೆ.