ಬೆಂಗಳೂರು : ಈತ ಎಂತಹ ಕಿಲಾಡಿ ಅಂದರೆ ಈಗಾಗಲೇ ಆತನಿಗೆ ಎರಡು ಮದುವೆಯಾಗಿದ್ದು, ಆದರೂ ಕೂಡ ಬೇರೆ ಹುಡುಗಿಯೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ಮೊದಲ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಬಂದು ಆತನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಹೌದು ಆನೇಕಲ್ ನಲ್ಲಿ ರವಿ ಎಂಬ ಖಿಲಾಡಿ ಕಾಮುಕನಿಗೆ ಇದೀಗ ಧರ್ಮದೇಟು ಬಿದ್ದಿದೆ. ಇಬ್ಬರ ಜೊತೆ ಮದುವೆಯಾಗಿದ್ದು ಅಲ್ಲದೆ ಮತ್ತೊಬ್ಬಳ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳಲು ಮುಂದಾಗಿದ್ದಾನೆ. ರವಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಯುವತಿಯರನ್ನು ಮದುವೆ ಆಗಿ ಪ್ರಗ್ನೆಂಟ್ ಮಾಡಿ ಅವರನ್ನು ಬಿಟ್ಟು ಬಿಡೋದೇ ಈತನ ಚಟವಾಗಿದೆ. ತುಮಕೂರು ಮೂಲದ ಆರೋಪಿ ರವಿಗೆ ಇದೀಗ ಹಿಗ್ಗಾಮುಗ್ಗ ಥಳಿಸಲಾಗಿದೆ.
ಕಳೆದ 2024ರಲ್ಲಿ ಪಂಕಜ ಜೊತೆಗೆ ರವಿಗೆ ಮೊದಲ ಮದುವೆಯಾಗಿತ್ತು. ಮೊದಲ ಪತ್ನಿ ಗರ್ಭಣಿಯಾಗಿದ್ದಾಗ 2025ರಲ್ಲಿ ಎರಡನೇ ಮದುವೆ ಆಗಿದ್ದಾನೆ ಮದುವೆ ಆಗಿರುವ ವಿಷಯ ತಿಳಿದು ಆಗ ಮೊದಲ ಪತ್ನಿ ಗಲಾಟೆ ಮಾಡಿದ್ದಾಳೆ. ಮೊದಲ ಪತ್ತೆ ಮತ್ತು ಆಕೆಯ ಕುಟುಂಬಸ್ಥರು ಮನೆಗೆ ನುಗ್ಗಿ ರವಿಗೆ ಧರ್ಮದೇಟು ಕೊಟ್ಟಿದ್ದಾರೆ. ಜೊತೆಗೆ ರವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಯಾವಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತೊ, ರವಿ ಇದೀಗ ತಲೆಮೆರೆಸಿಕೊಂಡಿದ್ದಾನೆ. ಪೊಲೀಸರು ಇದೀಗ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








