ಮಂಗಳೂರು : ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಪ್ರತೀಕಾರದ ಪೋಸ್ಟ್ ಹಾಗೂ ಸಂದೇಶಗಳ ಸಂಬಂಧ 12 ಎಫ್ ಐಆರ್ ದಾಖಲಿಸಿದ್ದಾರೆ.
ರೌಡಿ ಸುಹಾಸ್ ಹತ್ಯೆ ಪ್ರಕರಣದಲ್ಲಿ ಪ್ರತೀಕಾರದ ಪೋಸ್ಟ್ ಗಳ ವಿರುದ್ದ ಕೊನೆಗೂ ಪೊಲೀಸರು ಎಚ್ಚೆತ್ತುಕೊಂಡಿದ್ದು, ಪ್ರತೀಕಾರದ ಸಂದೇಶ, ಪೋಸ್ಟ್ ಸಂಬಂಧ 12 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮುಲ್ಕಿ, ಉರ್ವಾ ಬರ್ಕೆ, ಮೂಡಬಿದಿರೆ, ಕಾವೂರು ಠಾಣೆಗಳಲ್ಲಿ ಎಫ್ ಐಆರ್ ದಾಖಲಾಗಿದೆ.