ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ದೇಶನ ಕೋರಿದ್ದ ಪಿಐ ಇಂದು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. NEP ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾ ರಾಮಚಂದ್ರ. ಡಿ ಹುದ್ದಾರ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಾಜ ಸರ್ಕಾರ ನಿರಾಕರಿಸಿತ್ತು.ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿತು. ಶಿಕ್ಷಣದಲ್ಲಿ ತಾರತಮ್ಯ ವಿರಬಾರದು ಎಂದು ಎನ್‌ಇಪಿ ರೂಪಿಸಲಾಗಿದೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ದೇಶನ ಕೋರಿ ಗಿರೀಶ್ ಭಾರದ್ವಾಜ್ ಎನ್ನುವವರು ಹೈಕೋರ್ಟ್ ಗೆ PIL ಸಲ್ಲಿಸಿದರು. ನೀತಿ ನಿರೂಪಣೆ ವಿಚಾರದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಲ್ಲ ಎಂದು ಹೈಕೋರ್ಟ್ ಇದೆ ವೇಳೆ ತಿಳಿಸಿ, PIL ವಜಾಗೊಳಿಸಿ ಆದೇಶ ಹೊರಡಿಸಿತು.