ಬೆಂಗಳೂರು : ಪಹಲ್ಗಾಮ್ ಉಗ್ರ ದಾಳಿಯ ಪ್ರತಿಕಾರವಾಗಿ ಇದೀಗ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಪಾಕಿಸ್ತಾನದಲ್ಲಿರುವ ಉಗ್ರರ ಕ್ಯಾಂಪ್‌ಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ. ಅಲ್ಲದೆ ಭಾರತದ ಮೇಲೆ ಕ್ಷಿಪಣಿಯ ದಾಳಿ ಮಾಡುತ್ತಿದ್ದ ಪಾಕಿಸ್ತಾನದ ಮಿಸೆಲ್ ಗಳನ್ನು ಭಾರತ ಹೊಡೆದುರುಳಿಸಿದೆ. ಇನ್ನು ಈ ಒಂದು ಸನ್ನಿವೇಶದಲ್ಲಿ ಬೆಂಗಳೂರಿನ HAL ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹೌದು ಪಾಕಿಸ್ತಾನ ದಾಳಿಯಿಂದ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಚ್‌ಎಎಲ್ ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಓವರ್ ಟೈಮ್ ಕೆಲಸಕ್ಕೆ ಸಿದ್ಧವಾಗಿರುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದ್ದು, HAL ನ ಎಲ್ಲಾ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಿ ಆದೇಶಿಸಿದ್ದು, ಫೈಟರ್ ಫ್ಲೈಟ್ ಗಳ ನಿರ್ವಹಣೆ ಹಿನ್ನಲೆ ಕಡ್ಡಾಯವಾಗಿ ಹಾಜರಿರುವಂತೆ ಎಲ್ಲಾ ತಂತ್ರಜ್ಞರಿಗೆ ಸೂಚನೆ ನೀಡಲಾಗಿದೆ.