ನವದೆಹಲಿ : ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಭವನ ತಲುಪಿದ ನಂತ್ರ ಅವರು ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ, ಹೇಮಂತ್ ಸೊರೆನ್ ಕೂಡ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಮೈತ್ರಿ ಶಾಸಕರ ಒಮ್ಮತದ ನಂತರ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮರಳಲಿದ್ದಾರೆ. ಮೈತ್ರಿಕೂಟದ ನಾಯಕರು ಮತ್ತು ಶಾಸಕರು ಸಿಎಂ ಚಂಪೈ ಸೊರೆನ್ ಅವರ ನಿವಾಸದಲ್ಲಿ ಸಭೆ ಸೇರಿದರು. ಜೆಎಂಎಂ ಶಾಸಕಾಂಗ ಪಕ್ಷದ ನಾಯಕರಾಗಿ ಹೇಮಂತ್ ಅವರನ್ನ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಭೆಯಲ್ಲಿ, ಚಂಪೈ ಸೊರೆನ್ ಬದಲಿಗೆ ಹೇಮಂತ್ ಅವ್ರನ್ನ ಸಿಎಂ ಮಾಡಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್, ರಾಜ್ಯ ಅಧ್ಯಕ್ಷ ರಾಜೇಶ್ ಠಾಕೂರ್, ಹೇಮಂತ್ ಸೊರೆನ್ ಅವರ ಸಹೋದರ ಬಸಂತ್ ಮತ್ತು ಪತ್ನಿ ಕಲ್ಪನಾ ಉಪಸ್ಥಿತರಿದ್ದರು. ಹೇಮಂತ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಅವರು ಜಾರ್ಖಂಡ್’ನ 13ನೇ ಮುಖ್ಯಮಂತ್ರಿಯಾಗಲಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಹೈಕೋರ್ಟ್ನಿಂದ ಜಾಮೀನು ಪಡೆದ ನಂತರ ಹೇಮಂತ್ ಸೊರೆನ್ ಅವರನ್ನ ಬಂಧಿಸಿದ ಸುಮಾರು ಐದು ತಿಂಗಳ ನಂತರ ಜೂನ್ 28ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಂಧನಕ್ಕೂ ಮುನ್ನ ಜನವರಿ 31ರಂದು ಹೇಮಂತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೇಮಂತ್ ಸೊರೆನ್ ಅವರನ್ನು ಇಡಿ ಬಂಧಿಸಿದ ನಂತರ, ಅವರ ಆಪ್ತ ಚಂಪೈ ಸೊರೆನ್ ಅವರಿಗೆ ರಾಜ್ಯದ ಆಡಳಿತವನ್ನು ನೀಡಲಾಯಿತು. ಚಂಪೈ ಅವರು ಫೆಬ್ರವರಿ 2 ರಂದು ಜಾರ್ಖಂಡ್ನ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಪರಾಧವು ಎಷ್ಟೇ ಗಂಭೀರವಾಗಿದ್ದರೂ ತ್ವರಿತ ವಿಚಾರಣೆ ನಡೆಸುವ ಹಕ್ಕು ಪ್ರತಿಯೊಬ್ಬ ಆರೋಪಿಗೂ ಇದೆ: ಸುಪ್ರೀಂ ಕೋರ್ಟ್
ಉದ್ಯೋಗ ವಾರ್ತೆ: ಗುತ್ತಿಗೆ ಆಧಾರದಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳಿಗಾಗಿ ನೇರ ಸಂದರ್ಶನಕ್ಕೆ ಕರೆ | Job Alert