ಬೆಂಗಳೂರು : ಇಂದು ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದು ವಂದೇ ಭರತ್ 3 ಹೊಸ ರೈಲುಗಳಿಗೆ ಚಾಲನೆ ನೀಡಿದ್ದು, ಅಲ್ಲದೆ ಇತ್ತ ರಾಗಿ ಗುಡ್ಡದಲ್ಲಿರುವ ಆರ್.ವಿ ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಹಳದಿ ಮೆಟ್ರೋ ರೈಲು ಮಾರ್ಗಕ್ಕೆ ಚಾಲನೆ ನೀಡಿದರು. ಇತ್ತ ಕಾರ್ಯಕ್ರಮ ಮುಗಿಸಿ ಮೋದಿ ದೆಹಲಿಗೆ ವಾಪಸಾದ ಬಳಿಕ ಬೆಂಗಳೂರಲ್ಲಿ ಇದೀಗ ಭಾರಿ ಮಳೆ ಸುರಿಯುತ್ತಿದೆ.
ಹೌದು ಬೆಂಗಳೂರು ಮಹಾನಗರದ ಒಳಗಡೆ ಇದೀಗ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಲಾಲ್ ಬಾಗ್, ಶಾಂತಿನಗರ, ಜಯನಗರ, ಜಯನಗರ, ಜೆಪಿ ನಗರ, ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಸದಾಶಿವನಗರ, ಹೆಬ್ಬಾಳ, ಬಸವನಗುಡಿ, ಬನಶಂಕರಿ, ಚಂದ್ರಾ ಲೇಔಟ್, ಕೋರಮಂಗಲ ಹಾಗು ಕೋಣನಕುಂಟೆ ಸೇರಿದಂತೆ ಹಲವು ಭಾರಿ ಮಳೆ ಸುರಿಯುತ್ತಿದೆ.