ರಾಯಚೂರು : ರಾಜ್ಯದಲ್ಲಿ ಈಗಾಗಲೇ ವರುಣ ಅಬ್ಬರಿಸುತ್ತಿದ್ದು, ನಿನ್ನೆ ರಾಜ್ಯದಲ್ಲಿ ಮಹಾಮಳೆಗೆ ಒಟ್ಟು 8 ಜನರು ಬಲಿಯಾಗಿದ್ದಾರೆ. ಇದೀಗ ರಾಯಚೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ತುಂಬಿ ಹರಿಯುತ್ತಿದ್ದ ಸೇತುವೆ ಮೇಲಿಂದ ಬೈಕ್ ಸವಾರ ನೊಬ್ಬ ಹಳ್ಳಕ್ಕೆ ಬಿದ್ದಿದ್ದಾನೆ. ಅದೃಷ್ಟವಶಾತ ಸ್ಥಳೀಯರ ಸಹಾಯದಿಂದ ಬಚಾವ್ ಆಗಿದ್ದಾನೆ.
ಹೌದು ರಾಯಚೂರಿನಲ್ಲಿ ಮಳೆಗೆ ಹಳ್ಳದ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿವೆ. ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಇದೀಗ ಬೈಕ್ ಸವಾರನೊಬ್ಬ ದುಃಸಾಹಸಕ್ಕೆ ಮುಂದಾಗಿದ್ದು, ಮಾನ್ವಿ ತಾಲೂಕಿನ ದೋತರ ಬಂಡಿ ಬಳಿಯ ಸೇತುವೆ ಸಂಪೂರ್ಣವಾಗಿ ಮುಳುಗಿದೆ. ಈ ವೇಳೆ ಬೈಕ್ ಸಮೇತ ಹಳ್ಳಕ್ಕೆ ಸವಾರ ಬಿದ್ದಿದ್ದಾನೆ. ತಕ್ಷಣ ಸ್ಥಳಿಯರು ಆದನನ್ನು ರಕ್ಷಿಸಿದ್ದು ಬಳಿಕ ಜೆಸಿಬಿ ಮೂಲಕ ಬೈಕ್ ನನ್ನು ಹಳ್ಳದಿಂದ ಮೇಲಕ್ಕೆ ಎತ್ತಲಾಯಿತು.