ಚಿತ್ರದುರ್ಗ : ಶಾಲೆಗೆ ತೆರಳುವ ಸಂದರ್ಭದಲ್ಲಿ ವಿದ್ಯುತಂತೆ ಮೈ ಮೇಲೆ ಬಿದ್ದು ಶಿಕ್ಷಕಿ ಒಬ್ಬರು ಇಂದು ಸಾವನ್ನಪ್ಪಿದ್ದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿತ್ತು ಈ ಒಂದು ಘಟನೆ ಮಾತ್ರ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಬೋರಮ್ಮ (25) ಮತ್ತು ಪುತ್ರ ಪ್ರಣೀತ್ (3) ಎಂದು ತಿಳಿದುಬಂದಿದೆ.ಬಾತ್ ರೂಮ್ಗೆ ಎಳೆದಿದ್ದ ವೈಯರ್ ಅನ್ನು ಮೊದಲು ಅಜಯ್ ಗೆ ತಾಗಿದ್ದು, ರಕ್ಷಣೆಗೆ ಹೋದ ತಾಯಿ ಬೋರಮ್ಮ ಅವರಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಕೊಪ್ಪಳದಲ್ಲಿ ಶಿಕ್ಷಕಿ ಸಾವು
ಇನ್ನು ಕೊಪ್ಪಳದಲ್ಲಿ ಕೂಡ ಅಂತದ್ದೆ ಘಟನೆ ನಡೆದಿದ್ದು, ಶಾಲೆಗೆ ಹೊರಟಿದ್ದ ವೇಳೆ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಂಗಮರ ಕಲ್ಗುಡಿಯಲ್ಲಿ ಮೃತ ಶಿಕ್ಷಕಿಯನ್ನು ಜಂಗಮರ ಕಲ್ಗುಡಿ ಗ್ರಾಮದ ಹೊಸಕೇರಿಯ ಹರಿತಾ ಶ್ರೀನಿವಾಸ (26) ಎಂದು ಗುರುತಿಸಲಾಗಿದೆ.
ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಇಂದು ಬೆಳಗ್ಗೆ ಶಾಲೆಗೆ ಹೋಗುವಾಗ ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದಾರೆ. ರಸ್ತೆಯಲ್ಲಿ ಹೋಗುವಾಗ ತುಂಡಾಗಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಶಿಕ್ಷಕಿಯು ಅದನ್ನು ತುಳಿದಿದ್ದಾರೆ. ಮೃತ ಶಿಕ್ಷಕಿ ವಿದ್ಯಾನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.