ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಪೋಷಕರ ನಿರ್ಲಕ್ಷಕ್ಕೆ ಒಂದುವರೆ ವರ್ಷದ ಕಂದಮ್ಮ ಬಲಿಯಾಗಿದ್ದಾಳೆ. ಮನೆಯಲ್ಲಿ ಬಾತ್ರೂಮ್ ನಲ್ಲಿ ಇಟ್ಟಿದಂತಹ ತುಂಬಿದ ಬಕೆಟ್ ನಲ್ಲಿ ತಲೆಕೆಳಗಾಗಿ ಬಿದ್ದು ಒಂದೂವರೆ ವರ್ಷದ ಪೂರ್ವಿಕ ಎನ್ನುವ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ರಾವುರಿನಲ್ಲಿ ನಡೆದಿದೆ.
ನೀರು ತುಂಬಿದ ಬಕೆಟ್ಗೆ ಬಿದ್ದು ಮಗು ಸಾವನ್ನಪ್ಪಿದೆ. ಪೋಷಕರ ನಿರ್ಲಕ್ಷದಿಂದಾಗಿ ಇದೀಗ ಹಸುಳೆ ಬಲಿಯಾಗಿದೆ. ಎನ್ ಆರ್ ಪುರ ತಾಲೂಕಿನ ರಾಹುರಿನಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಒಂದುವರೆ ವರ್ಷದ ಮಗು ಪೂರ್ವಿಕ ಎನ್ನುವ ಮಗು ಸಾವನ್ನಪ್ಪಿದೆ ಬಾತ್ ರೂಂ ನಲ್ಲಿ ನೀರು ತುಂಬಿದ್ದ ಬಕೆಟ್ ಇತ್ತು. ಪೂರ್ವಿಕ ಆಟ ಆಡುತ್ತಾ ಬಾತ್ ರೂಂ ಗೆ ಹೋಗಿದ್ದಾಳೆ.ಈ ವೇಳೆ ತಲೆಕೆಳಗಾಗಿ ಮಗು ಬಿದ್ದಿದೆ. ಆನಂದ್ ಹಾಗೂ ಅನು ಎನ್ನುವ ದಂಪತಿಯ ಪುತ್ರಿ ಎಂದು ತಿಳಿದುಬಂದಿದೆ.