ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಕೇವಲ 7 ನಿಮಿಷದಲ್ಲಿ ಯಶಸ್ವಿಯಾಗಿ ಹೃದಯ ಶಿಫ್ಟ್ ಮಾಡಲಾಗಿದೆ. ಹೌದು ರಾಗಿಗುಡ್ಡ ನಿಲ್ದಾಣದಿಂದ ಬೊಮ್ಮಸಂದ್ರಕ್ಕೆ ಹೃದಯ ಶಿಫ್ಟ್ ಮಾಡಲಾಗಿದೆ ಇದು ಐದನೇ ಬಾರಿಗೆ ಮೆಟ್ರೋ ಟ್ರೈನಲ್ಲಿ ಅಂಗಾಂಗ ರವಾನೆ ಮಾಡಿರುವ ಘಟನೆ ನಡೆದಿದೆ.
ಖಾಸಗಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೃದಯ ಶಿಫ್ಟ್ ಮಾಡಲಾಗಿದೆ. ನಿನ್ನೆ 7 ಗಂಟೆ 32 ನಿಮಿಷಕ್ಕೆ ರಾಗಿ ಗುಡ್ಡ ಸ್ಟೇಷನ್ ನಿಂದ ಹೊರಟು 7:39 ನಿಮಿಷಕ್ಕೆ ಬೊಮ್ಮಸಂದ್ರ ನಿಲ್ದಾಣಕ್ಕೆ ತಲುಪಿ ನಾರಾಯಣ ಹೃದಯಾಲಯಕ್ಕೆ ಹೃದಯ ಶಿಫ್ಟ್ ಮಾಡಲಾಗಿದೆ. ಮೆಟ್ರೋ ರೈಲು ಯಾವ ರೀತಿ ಉಪಯೋಗ ಬರುತ್ತೆ ಅಂತ ಈ ಘಟನೆ ಮೂಲಕ ತಿಳಿಯುತ್ತದೆ ಆರೋಗ್ಯ ಸಮಸ್ಯೆ ಬಂದಾಗಲೂ ಕೂಡ ಮೆಟ್ರೋ ತುಂಬಾ ಸಹಕಾರಿಯಾಗಿದೆ.








