ದಾವಣಗೆರೆ : ಕಳೆದ ಕೆಲವು ದಿನಗಳ ಹಿಂದೆ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮೇಲ್ಭಾಗದಲ್ಲಿರುವ ಬಾಯ್ಲರ್ ಕುಸಿದು ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ ನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಸ್ವಾಮಿ, ವಾರ್ಡನ್ ಬಂಧಿಸಲಾಗಿದೆ.ಹರಿಹರ ತಾಲೂಕಿನ ಜಿಗಳಿ ಗ್ರಾಮದ ರಾಮಪ್ಪ ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 11 ವರ್ಷದ ಮಗನನ್ನು ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದ.
ವಸತಿ ನಿಲಯದಲ್ಲಿ ಬಾಲಕ ರಂಗನಾಥ್ ಮೇಲೆ ಬಾಯ್ಲರ್ ಬಿದ್ದು ಸಾವನ್ನಪ್ಪಿದ್ದ. ಬಾಯ್ಲರ್‌ಗೆ ವಾರ್ಡನ್ ಕಟ್ಟಿಗೆ ಹಾಕಿ ಬರಲು ಬಾಲಕನಿಗೆ ಹೇಳಿದ್ದರು. ಕಟ್ಟಿಗೆ ಹಾಕಲು ತೆರಳಿದ್ದಾಗ ಈ ಅವಘಡ ನಡೆದಿತ್ತು.ಅವಘಡ ನಡೆದಾಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಬಾಲಕನ ತಂದೆ ರಾಮಪ್ಪ, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.