ಬೆಂಗಳೂರು : ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ನೀಡಿದ್ದ ದೂರಿನ ಮೇರೆಗೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಈ ಕುರಿತಂತೆ ಉದ್ಯಮಿ ವಿಜಯ್ ತಾತ ಅವರು ಎಚ್ ಡಿ ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿ ಕೇಳಿದ್ದಾರೆ ಎಂದು ನಾನು ಪ್ರೂವ್ ಮಾಡುತ್ತೇನೆ ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ.
ಈ ಕುರಿತಂತೆ ವಿಜಯ್ ತಾತಾ ಅವರು ಮಾತನಾಡಿದ್ದು, ನನ್ನ ವಿರುದ್ಧ 100 ಕೋಟಿ ರೂಪಾಯಿ ಆರೋಪ ಕೇಳಿ ಬಂದಿದೆ. ಇಂತದಕ್ಕೆಲ್ಲ ಅರ್ಥ ಬೇಡ್ವಾ? ಕೇಂದ್ರ ಸಚಿವರ ಹತ್ತಿರ ನಾನು 100 ಕೋಟಿ ಕೇಳುವುದಕ್ಕೆ ಸಾಧ್ಯನಾ? ಸ್ವಲ್ಪ ಆದ್ರೂ ಕಾಮನ್ ಸೆನ್ಸ್ ಇದೆಯಾ ಇಂತ ಹೇಳಿಕೆ ಕೊಡೋದಕ್ಕೆ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ತಾತಾ ಆಕ್ರೋಶ ಹೊರಹಾಕಿದ್ದಾರೆ.
ನಾನು 50 ಕೋಟಿ ಕೇಳಿದ್ದಾರೆ ಅಂತ ಪ್ರೂವ್ ಮಾಡುತ್ತೇನೆ.ನಮ್ಮ ಮನೆಗೆ ಬಂದು 50 ಕೋಟಿ ಕೇಳಿದ್ದಾರೆ ಅಂತ ನಾನು ದಾಖಲೆ ಸಮೇತ ಪ್ರೋವ್ ಮಾಡುತ್ತೇನೆ. ಅವರು ನಾನು 100 ಕೋಟಿ ಕೇಳಿದ್ದೇನೆ ಅಂತ ಪ್ರೋವ್ ಮಾಡ್ತಾರಾ? ನೀವು ಕಾರ್ಯಕರ್ತರನ್ನು ಬೆಳೆಸುವ ಕೆಲಸ ಮಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಬಿಸಾಡಬೇಡಿ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ತಾತ ಆಕ್ರೋಶ ಹೊರಹಾಕಿದ್ದಾರೆ.