ಬೆಂಗಳೂರು : ಸಿ ಎ ಫೌಂಡೇಶನ್ ಪರೀಕ್ಷೆಗೆ ಅಡ್ಡಿ ಎಂದು ಬಿಕಾಂ ಪರೀಕ್ಷೆ ಮುಂದೂಡಲು ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯ ಮೇಲ್ಮನವಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ತುರ್ತು ವಿಚಾರಣೆ ನಡೆದಿದ್ದು, ಬಿಕಾಂ ಪರೀಕ್ಷೆಗಳಿಗೆ ಹೈ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ ಪರೀಕ್ಷೆ ಮುಂದೂಡಿಕೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ನ್ಯಾ. ಅನು ಶಿವರಾಮನ್ನ, ನ್ಯಾ. ಎಂ.ಐ ಅರುಣ್ ಅವರ ಪೀಠದಲ್ಲಿ ಈ ಒಂದು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಿತು. ಸಿ ಎ ಫೌಂಡೇಶನ್ ಪರೀಕ್ಷೆಗೆ ಅಡ್ಡಿ ಎಂದು ಪರೀಕ್ಷೆ ಮುಂದೂಡಲು ಹೈಕೋರ್ಟ್ ಆದೇಶಿಸಿತ್ತು. ನಾಳೆಯಿಂದ ಆರಂಭವಾಗುವ 1,3 ಹಾಗೂ 5ನೇ ಸೆಮಿಸ್ಟರ್ ಬಿಕಾಂ ಪರೀಕ್ಷೆ ಮುಂದೂಡಗೆ ಮಾಡಲಾಗಿತ್ತು.
ಮುಂದೂಡಿಕೆಯಿಂದ 40 ರಿಂದ 50 ಸಾವಿರ ಬಿ.ಕಾಮ್ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.ಹೀಗಾಗಿ ಏಕದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಲು ಮನವಿ ಸಲ್ಲಿಸಿತ್ತು. ಬೆಂಗಳೂರು ವಿಶ್ವವಿದ್ಯಾಲಯದಿಂದ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.