ಬೆಂಗಳೂರು : ಮೈಸೂರು ಜಿಲ್ಲೆಯ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ವಿನಾಯಿತಿ ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಭವಾನಿ ರೇವಣ್ಣ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಪ್ರಕರಣದ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದೆ.
ಅರ್ಜಿಯಲ್ಲಿ ಹಾಸನ ಮೈಸೂರಿಗೆ ತೆರಳದಂತೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲು ಮನವಿ ಮಾಡಲಾಯಿತು. ಭವಾನಿ ರೇವಣ್ಣ ಅರ್ಜಿಗೆ ಎಸ್ಪಿಪಿ ಪ್ರೊ. ರವಿವರ್ಮಕುಮಾರ್ ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದರು. ಅತ್ಯಾಚಾರ ಸಂತ್ರಸ್ತೇ ಅಪಹರಣ ಕೇಸ್ನಲ್ಲಿ ಭವಾನಿ ಕಿಂಗ್ ಪಿನ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣನಿಂದ ನೂರಾರು ಸಂತ್ರಸ್ತ ಮಹಿಳೆಯರು ಇದ್ದಾರೆ.
ಅವರಲ್ಲಿ ಕೇವಲ ನಾಲ್ಕು ಮಹಿಳೆಯರು ಮಾತ್ರ ದೂರು ನೀಡಿದ್ದಾರೆ. ಜಾಮೀನು ಷರತ್ತು ಸಡಲಿಸಿದರೆ ಸಾಕ್ಷ್ಯಾಧಾರ ನಾ ಶಕ್ಕೆ ಪ್ರಯತ್ನಿಸಬಹುದು. ಹೀಗಾಗಿ ಜಾಮೀನು ಷರತ್ತು ಸಡಿಲಿಸದಂತೆ ಮನವಿ ಮಾಡಿದರು. ಈ ವೇಳೆ ನ್ಯಾ.ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಪೀಠ ಆದೇಶ ಕಾಯ್ದಿರಿಸಿದರು.