ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಂತರ ಜಾಮೀನು ಪಡೆದುಕೊಂಡು ನಟ ದರ್ಶನ್ ಬಿಡುಗಡೆಯಾಗಿದ್ದಾರೆ. ಆದರೆ 6 ವಾರ ಕಳೆದರೂ ಕೂಡ ಅವರು ಬೆನ್ನು ನೋವಿನ ಸಮಸ್ಯೆಗೆ ಸರ್ಜರಿ ಮಾಡಿಸಿಲ್ಲ. ಡಿಸೆಂಬರ್ 11ರಂದು ಅವರ ಮಧ್ಯಂತರ ಜಾಮೀನು ಅವಧಿ ಅಂತ್ಯವಾಗಲಿದೆ. ಹಾಗಾಗಿ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಬಳಿಕ ನ್ಯಾಯಮೂರ್ತಿಗಳಾದ ಎಸ್ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದರು.
ಈಗಾಗಲೆ ಬೆನ್ನು ನೋವಿನ ಸಮಸ್ಯೆ ತಿಳಿಸಿ ನಟ ದರ್ಶನ್ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 11ರಂದು ಅವರ ಮಧ್ಯಂತ ಜಾಮೀನು ಅವಧಿ ಮುಕ್ತಾಯವಾಗಲಿದೆ. ಹಾಗಾಗಿ ಕಳೆದ 5 ವಾರಗಳಿಂದ ಅವರು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಯಾವುದೇ ಬೆನ್ನುನೋವಿನ ಶಸ್ತ್ರ ಚಿಕಿತ್ಸೆಗೂ ಕೂಡ ಅವರು ಒಳಗಾಗಿಲ್ಲ. ಹೀಗಾಗಿ ಇದೀಗ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದ ಬಳಿಕ ಅರ್ಜಿಯ ಆದೇಶವನ್ನು ಕಾಯ್ದಿರಿಸಿ ಅದೇಶಿಸಿದರು.
ವಿಚಾರಣೆ ಆರಂಭವಾದಾಗ ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಬಹಳ ಸುಧೀರ್ಘವಾಗಿ ವಾದ ಮಂಡನೆ ಮಾಡಿದರು. ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸುತ್ತಿದ್ದಾರೆ. ರೇಣುಕಾಸ್ವಾಮಿ ಅಪಹರಣದ ಜೊತೆಗೆ ರಾಬರಿ ಕೂಡ ಮಾಡಿದ್ದಾರೆ. ರೇಣುಕಾ ಸ್ವಾಮಿ ದೇಹದ ಮೇಲಿನ ಕರಡಿಗೆ ಕಿತ್ತುಕೊಂಡಿದ್ದರು. ಅಪಹರಣಕ್ಕೆ ಪೂರಕವಾಗಿ ಹೈಕೋರ್ಟ್ ನಲ್ಲಿ ತೀರ್ಪು ಉಲ್ಲೇಖಿಸಿ, ಪಾನಿಪುರಿ ಕಿಟ್ಟಿ, ದುನಿಯಾ ವಿಜಯ್ ಕೇಸ್ ನಲ್ಲಿ ಇದೆ ಕೋರ್ಟ್ ವಜಾ ಗೊಳಿಸಿದೆ ಎಂದು ವಾದಿಸಿದರು.
ಇಂತಹ ಕೃತ್ಯ ಅಪಹರಣವಾಗುವುದಿಲ್ಲವೆಂಬ ವಾದವನ್ನು ತಿರಸ್ಕರಿಸಿದೆ. ರೇಣುಕಾ ಸ್ವಾಮಿಯನ್ನು ಮೋಸದಿಂದ ಅಪಹರಿಸಿದ್ದಾರೆ.ದರ್ಶನ್ ರನ್ನು ಭೇಟಿ ಮಾಡಿಸಿ ಕರೆ ತರುವುದಾಗಿ ಆರೋಪಿಗಳು ಹೇಳಿದ್ದರು. ಇದು ಕೂಡ ಅಪಹರಣದ ವ್ಯಾಖ್ಯಾನಕ್ಕೆ ಬರುತ್ತದೆ. ಇಟಿಯೋಸ್ ಕಾರನ್ನು ಶೆಡ್ಗೆ ಬಿಡುವಂತೆ a10 ಆರೋಪಿ ವಿನಯ್ ಸೂಚಿಸಿದ್ದ.ಅದಾದ ಬಳಿಕ ಇಟಿಯೋಸ್ ಕಾರು ಶೆಡ್ ಗೆ ಬಂದಿದೆ. ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಈ ವೇಳೆ ಪ್ರಸನ್ನ ಕುಮಾರ್ ಪ್ರತ್ಯಕ್ಷ ದೃಶ್ಯ ಸಾಕ್ಷಿಯನ್ನು ಓದಿದರು. ಪವನ್ A3 ಊಟ ತರುತ್ತಾನೆ. ಉಳಿದವರು ಊಟ ಮಾಡುತ್ತಾರೆ. ಧನರಾಜ್ ತಂದಿದ್ದ ಯಂತ್ರದಲ್ಲಿ ರೇಣುಕಾಸ್ವಾಮಿಗೆ ಶಾಕ್ ಕೊಡುತ್ತಾನೆ. ಆಗ ರೇಣುಕಾಸ್ವಾಮಿ ವಾಹನದ ಬಳಿ ಬಿದ್ದಿದ್ದ. ದರ್ಶನ್ ಕಾರಿನಿಂದ ಬಂದವರೇ ರೇಣುಕಾ ಸ್ವಾಮಿಗೆ ಒದ್ದರು. ಪವಿತ್ರ ಗೌಡ ಚಪ್ಪಲಿಯಿಂದ ಹೊಡೆಯುತ್ತಾಳೆ. ನಂತರ ಆ ಚಪ್ಪಲಿ ತೆಗೆದುಕೊಂಡು ನಟ ದರ್ಶನ್ ಕೂಡ ಹಲ್ಲೆ ಮಾಡುತ್ತಾರೆ.ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯಾ ಎಂದು ಹೇಳಿ ಹಲ್ಲೆ ಮಾಡುತ್ತಾರೆ.
ದರ್ಶನ್ ರೇಣುಕಾ ಸ್ವಾಮಿಯ ಎದೆಯ ಭಾಗಕ್ಕೆ ತುಳಿಯುತ್ತಿದ್ದರು. ಪ್ಯಾಂಟನ್ನು ಬಿಚ್ಚಿ ಪವನ್ ಕೈಯಲ್ಲಿ ಮೆಸೇಜ್ ಓದಿಸಿದರು. ನಂತರ ಪ್ಯಾಂಟ್ ಬಿಚ್ಚಿಸಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ದರ್ಶನ್ ಒದ್ದರು. ಬಳಿಕ ಪವಿತ್ರಗೌಡಳನ್ನು ಬಿಟ್ಟು ಬರುವಂತೆ ಪುನೀತ್ ಗೆ ಸೂಚಿಸಿದರು. ಅವರನ್ನ ಬಿಟ್ಟು ಬಂದಾಗಲೂ ದರ್ಶನ್ ರೇಣುಕಾಸ್ವಾಮಿಗೆ ಹೊಡೆಯುತ್ತಿದ್ದರು. ನಂತರ ದರ್ಶನ್ ಜೊತೆಗೆ ಆರೋಪಿಗಳು ಫೋಟೋ ತೆಗೆಸಿಕೊಳ್ಳುತ್ತಾರೆ. ಸಾಕ್ಷಿಯ ಮೊಬೈಲ್ನಲ್ಲಿ ಫೋಟೋ ತೆಗೆಸಿಕೊಳ್ಳುತ್ತಾರೆ ಆ ಫೋಟೋ ಸಾಕ್ಷಿಯ ಮೊಬೈಲ್ನಲ್ಲಿ ರಿಕವರಿ ಆಗಿದೆ ಎಂದು ವಾದಿಸಿದರು.
A2, A7, A8 ತೆಗೆಸಿಕೊಂಡಿರುವ ಫೋಟೋ ಇದೆ. ಇದೇ ಶೂ ಮತ್ತು ಬಟ್ಟೆಗಳನ್ನು ರಿಕವರಿ ಮಾಡಲಾಗಿದೆ. A8 ಡ್ರೈವರ್ ಪ್ಯಾಂಟ್ ಮಾತ್ರ ಬದಲಾಗಿದೆ. ಬಾಡಿ ಶಿಫ್ಟ್ ಮಾಡುವ ಉದ್ದೇಶದಿಂದ ಪ್ಯಾಂಟ್ ಬದಲಿಸಿದ್ದಾನೆ. ಇದಕ್ಕೆ ಪೂರಕವಾಗಿ A8 ಹೇಳಿಕೆ ದಾಖಲಾಗಿದೆ. ನಂತರ ಈ ಫೋಟೋಗಳನ್ನು ಆರೋಪಿಗಳಿಗೆ ಕಳುಸಿರುತ್ತೇನೆ. ನಂತರ ಬಾಡಿ ಅನ್ನು ಹಾಲ್ ನಲ್ಲಿ ಮಲಗಿಸಿ ರುತ್ತಾರೆ ಹಾಲ್ ನಲ್ಲಿ ರೇಣುಕಾ ಸ್ವಾಮಿಯ ಬ್ಲಡ್ ಸ್ಕ್ವಾಬ್ ಸಿಕ್ಕಿದೆ. ಬಾಸ್ ಹೊಡೆದ ಜಾಗದಲ್ಲಿ ಬ್ಲಡ್ ಬರುತ್ತಿರುವುದಾಗಿ ಸಹ ಆರೋಪಿ ಹೇಳಿದ್ದಾನೆ.ನೀರು ಕೊಟ್ಟರೆ ಕೊಡುತ್ತಿಲ್ಲವೆಂದು ಸಹ ಆರೋಪಿ ಹೇಳಿದ್ದಾನೆ. ಎಲ್ಲ ಪ್ರತ್ಯಕ್ಷ ಸಾಕ್ಷಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ ರೇಣುಕಾ ಸ್ವಾಮಿ ಸತ್ತಿದ್ದನು ಇಲ್ಲವೋ ಎಂದು ಹೇಳಲು ವೈದ್ಯರು ಇರಲಿಲ್ಲ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಎದೆ ಮೂಳೆಮುರಿದ ಮಾಹಿತಿ ಇದೆ. ರೇಣುಕಾ ಸ್ವಾಮಿಯ ಒಟ್ಟು 17 ಮೂಳೆಗಳು ಮುರಿದಿವೆ. ದರ್ಶನ್ ಮತ್ತು ಆರೋಪಿಗಳ ಉಪಸ್ಥಿತಿಗೆ ಫೋಟೋಗಳ ಸಾಕ್ಷಿ ಇದೆ ಶೆಡ್ನಲ್ಲೇ ಈ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಶೆಡ್ನಲ್ಲಿದ್ದ ವಾಹನಗಳು ಫೋಟೋದಲ್ಲಿ ಕಾಣಬಹುದು. 2.5 × 1 ಸೆಂಟಿಮೀಟರ್ ಗಾಯದ ಮಾರ್ಕ್ ಅಷ್ಟೇ ಇದೆ ಎಂದು ವಾದಿಸಿದ್ದಾರೆ ಅದರಲ್ಲಿ ಇಷ್ಟೊಂದು ರಕ್ತ ಬರುವುದಿಲ್ಲವೆಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ. ಆದರೆ ದೇಹದಲ್ಲಿ 13 ರಕ್ತ ಗಾಯಗಳಿವೆ ಎಂದು ಪೋಸ್ಟ್ ಮಾರ್ಟಂ ವರದಿ ಇದೆ ಎಂದು ಅವರು ವಾದಿಸಿದರು.
ಮರ್ಮಾಂಗಕ್ಕೂ ಗಾಯವಾಗಿರುವ ಬಗ್ಗೆ ಪೋಸ್ಟ್ ಮಾಟಂ ವರದಿ ಇದೆ ಗಾಯವಾಗಿರುವ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದೆ ಕೊನೆ ಊಟ ಮಾಡಿದ ಒಂದೆರಡು ಗಂಟೆಯಲ್ಲಿ ರೇಣುಕಾ ಸ್ವಾಮಿಯ ಪ್ರಾಣ ಹೋಗಿದೆ ಹೀಗೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ಹೇಳಲಾಗಿದೆ ದೇಹದಲ್ಲಿರುವ ಆಹಾರ ಮತ್ತು ದ್ರವವನ್ನು ಪರಿಶೀಲಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ, ವೈದ್ಯರ ಅಭಿಪ್ರಾಯ & ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಹೋಲಿಕೆಯಾಗಿದೆ ಎಂದು ಪ್ರಸನ್ನ ಕುಮಾರ್ ವಾದಿಸಿದರು.
ಇನ್ನೂ A1 ಪವಿತ್ರಗೌಡ ಸ್ನೇಹಿತೆ ಸಮತಾ ಅವರ ಹೇಳಿಕೆ ದಾಖಲಾಗಿದ್ದು, ಜೂನ್ 8ರಂದು 2024ರಂದು ಪವಿತ್ರ ಗೌಡ ಕಡೆಯಿಂದ ವಾಟ್ಸಪ್ ಕಡೆ ಬಂದಿದೆ ಎಂದು ಸಮತಾವರು ಹೇಳಿಕೆ ನೀಡಿದ್ದಾರೆ. A3 ಪವನ್ ಶೆಡ್ ನಿಂದ ಸ್ಟೋನಿ ಬ್ರೂಕ್ ಗೆ ಬಂದು ದರ್ಶನ್ ಜೊತೆ ಮಾತನಾಡಿದ್ದ. ಇದಕ್ಕೆ ಸಾಕ್ಷಿಯಾಗಿ ಅಷ್ಟೇ ನಟ ಚಿಕ್ಕನ್ ಅವರ ಹೇಳಿಕೆ ಪಡೆಯಲಾಗಿದೆ. ದರ್ಶನ್ ಕಿವಿಯಲ್ಲಿ ಪವನ್ ಮಾತನಾಡಿದ ಬಗ್ಗೆ ಚಿಕ್ಕಣ್ಣ ಹೇಳಿಕೆ ಇದೆ ಅಲ್ಲಿಂದ ದರ್ಶನ್ ತೆರಳಿರುವುದಕ್ಕೆ ಸಿಸಿಟಿವಿ ದೃಶ್ಯಗಳ ಸಾಕ್ಷಿ ಇದೆ.
ಕೊಲೆ ನಡೆದ ಸ್ಥಳದ ಮಣ್ಣಿನಲ್ಲಿ ಡಿಎನ್ಎ ಪತ್ತೆಯಾಗಿದೆ. ದರ್ಶನ್ ಬಟ್ಟೆ ಶೂನಲ್ಲಿ ರೇಣುಕಾ ಸ್ವಾಮಿಯ ರಕ್ತದ ಡಿ ಎನ್ ಎ ಪತ್ತೆಯಾಗಿದೆ. ರೇಣುಕಾ ಸ್ವಾಮಿ ರಕ್ತವಿದ್ದ ಸೀಲ್ ಮಾಡಿದ ಬಾಟಲ್ ಕಳುಹಿಸಿದ್ದಾರೆ. ಪೋಸ್ಟ್ ಮಾರ್ಟಂ ವೈದ್ಯರು ರೇಣುಕಾ ಸ್ವಾಮಿಯ ರಕ್ತವಿದ್ದ ಸೀಲ್ ಮಾಡಿದ ಬಾಟಲ್ ಕಳುಹಿಸಿದ್ದಾರೆ. ಡಿ ಎನ್ ಎ ಮ್ಯಾಚ್ ಮಾಡಲು ಇದನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ತನಿಖೆ ಮಾಡಿದಂತಹ ಪೊಲೀಸರ ಪಾತ್ರ ಏನು ಇಲ್ಲ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಎಫ್ ಎಸ್ ಎಲ್ ನವರು ಆ ಬಾಟಲಿನಿಂದ ರಕ್ತ ಹಾಕಿದ್ದಾರೆ ಎಂಬ ವಾದ ಒಪ್ಪಲಾಗುವುದಿಲ್ಲ. ನಟ ದರ್ಶನ್ ಪರ ವಕೀಲರ ವಾದವನ್ನು ಉಲ್ಲೇಖಿಸಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದು, ಆರೋಪಿಗಳ ಬಟ್ಟೆ ಶೂಗಳಲ್ಲಿ ರೇಣುಕಾ ಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ. ಆರೋಪಿಗಳ ಬಟ್ಟೆ ಶೂಗಳಲ್ಲಿ ರೇಣುಕಾ ಸ್ವಾಮಿಯ ರಕ್ತದ ಕಲೆ ಪತ್ತೆಯಾಗಿದೆ. ದರ್ಶನ್ ಕಳುಹಿಸಿದ ಹಣವನ್ನು ಕೂಡ ರಿಕವರಿ ಮಾಡಲಾಗಿದೆ.ಆರೋಪಿಗಳ ಬಳಿಯಿಂದ ದರ್ಶನ್ ಹಣ ರಿಕವರಿ ಮಾಡಲಾಗಿದೆ.
ಜೂನ್ 10 ರಂದು A15, A16 A17 ಆರೋಪಿಗಳು ಸರೆಂಡರ್ ಆದರು. A14 ಎಲ್ಲರನ್ನು ಡ್ರಾಪ್ ಮಾಡಿ ಹೊರಟು ಹೋದ. ನಂತರ ಘಟನೆಯ ಬಗ್ಗೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. A4 ಕರೆ ತಂದು ವಿಚಾರಣೆ ನಡೆಸಿದಾಗ ಘಟನೆ ಬಾಯಿ ಬಿಟ್ಟಿದ್ದಾನೆ.ಬಂಧನಕ್ಕೆ ಕಾರಣಗಳನ್ನು ಆರೋಪಿಗಳಿಗೆ ತಿಳಿಸಿಲ್ಲವೆಂದು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ತನಿಖಾಧಿಕಾರಿ ಬಳಿ ಇರುವ ಮಾಹಿತಿಯನ್ನು ಅಷ್ಟೇ ಆರೋಪಿಗಳಿಗೆ ನೀಡಲು ಸಾಧ್ಯ ಆಗಿದೆ. ರಾತ್ರಿ 10.30 ರಿಂದ ಬೆಳಗ್ಗೆ 8 ಗಂಟೆ ನಡುವಿನ ತನಿಖೆಯ ವೇಳೆ ಇದ್ದ ಮಾಹಿತಿ ಇದೆ. ಇರುವ ಮಾಹಿತಿಯನ್ನೇ ಬಂಧನಕ್ಕೆ ಕಾರಣವಾಗಿ ನೀಡಲಾಗಿದೆ.
ಬಂಧನಕ್ಕೆ ಕಾರಣಗಳನ್ನು ಆರೋಪಿಗಳಾಗಿ ಒದಗಿಸಲಾಗಿದೆ. ಈ ಬಗ್ಗೆ ಪೂರ್ಣ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ಅರೆಸ್ಟ್ ಮೆಮೊದಲ್ಲಿ ಸಾಕ್ಷಿ ಕಿರಣ್ ಸಹಿ ಇದೆ. ಹೀಗಿದ್ದಾಗ ಆತನ ಸಾಕ್ಷಿ ಹೇಳಿಕೆ ಪಡೆಯಲು ವಿಳಂಬ ಏಕೆ ಆಯಿತು ಎಂದು ಎಸ್.ಪಿ. ಪಿ ಪ್ರಸನ್ನಕುಮಾರ್ ಅವರಿಗೆ ನ್ಯಾಯಮೂರ್ತಿಗಳಾದಂತಹ ಎಸ್ ವಿಶ್ವಜೀತ್ ಶೆಟ್ಟಿ ಅವರು ಪ್ರಶ್ನಿಸಿದರು. ಅದಕ್ಕೆ ಪ್ರಸನ್ನ ಕುಮಾರ್ ಅವರು, ಜೂನ್ 15ರಂದು ಸಾಕ್ಷಿ ಕಿರಣ್ ಹೇಳಿಕೆ ಪಡೆಯಲಾಗಿದೆ. ಯಾರು ಸಾಕ್ಷಿಗಳೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಸಿಡಿಆರ್ ತೆಗೆಸಿದ ಬಳಿಕವಷ್ಟೇ ಕಿರಣ್ ಹಾಜರಿದ್ದ ಬಗ್ಗೆ ತಿಳಿಯಿತು. ನಂತರ ಆತನ ಹೇಳಿಕೆ ಪಡೆಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಪ್ರಮುಖ ಸಾಕ್ಷಿ ಪುನೀತ್ ಹೇಳಿಕೆ ಪಡೆಯಲು ವಿಳಂಬವಾದ ಬಗ್ಗೆ ಸ್ಪಷ್ಟನೆ ಹಿಡಿದು ಗೋವಾಗೆ ಪುನೀತ್ ತೆರಳಿದ ಬಗ್ಗೆ ದಾಖಲೆ ಸಲ್ಲಿಕೆಯಾಗಿದೆ. ಜೂನ್ 19ರಂದು ಆತ ಗೋವಾ ತಿರುಪತಿ ಹುಬ್ಬಳ್ಳಿಯಲ್ಲಿ ತಿರುಗಾಡಿ ಬಂದಿದ್ದ. ತಾನು ಆರೋಪಿ ಅಲ್ಲವೆಂದು ಸ್ಪಷ್ಟವಾದ ಬಳಿಕ ಪುನೀತ್ ಮರಳಿ ಬಂದಿದ್ದ. ಕೇವಲ ಮೌಖಿಕ ಹೇಳಿಕೆ ಅಷ್ಟೇ ಅಲ್ಲ ಬೋರ್ಡಿಂಗ್ ಪಾಸ್ ಇದೆ. ಹೋಟೆಲಿಗೆ ಹೋಗಿದ್ದರ ಬಗ್ಗೆ ಸಿಸಿಟಿವಿ ದೃಶ್ಯ ಸಾಕ್ಷಿ ಇದೆ.ಅಲ್ಲದೇ ಹೋಟೆಲ್ ಡೈರಿಯಲ್ಲಿ ಸಾಕ್ಷಿಯ ಸಹಿ ಕೂಡ ಇರುವುದಾಗಿ ಪೋಲೀಸರ ಪರ ಎಸ್.ಪಿ.ಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು.
ಪ್ರಸನ್ನಕುಮಾರ್ ವಾದ ಅಂತ್ಯವಾದ ಬಳಿಕ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸುತ್ತಿದ್ದು, ದರ್ಶನ್ ನಡವಳಿಕೆ ಪರಿಗಣಿಸಬೇಕು ಎಂದು ಎಸ್ ಪಿ ಪಿ ವಾದಿಸಿದ್ದಾರೆ. ಸರ್ಜರಿಗಾಗಿ ಮಧ್ಯಂತರ ಜಾಮೀನು ಪಡೆದು ಮಾಡಿಸಿಲ್ಲವೆಂದು ವಾದಿಸಿದ್ದಾರೆ ವೈದ್ಯರು 5 ಸರ್ಟಿಫಿಕೇಟ್ಗಳನ್ನು ನೀಡಿದ್ದಾರೆ. ಅಕ್ಟೋಬರ್ 24ರ ಸರ್ಟಿಫಿಕೇಟ್ ಸರ್ಜರಿ ಅಗತ್ಯವೆಂದು ಹೇಳಿದೆ. ಕಾಲು ಮರಗಟ್ಟುತ್ತದೆ ಎಂದು ಹೇಳಿದ್ದಾರೆ.ಬಿಜಿಎಸ್ ವೈದ್ಯರ ಸರ್ಟಿಫಿಕೇಟ್ ನಲ್ಲಿ ಬಳ್ಳಾರಿ ವೈದ್ಯರ ಸರ್ಟಿಫಿಕೇಟ್ ಅನ್ನು ಖಚಿತಪಡಿಸಿದ್ದಾರೆ ಎಂದು ನಟ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದರು.
ದರ್ಶನ್ ಮಧ್ಯಾಂತರ ಜಾಮೀನಿನ ಯಾವುದೇ ಶರತ್ತು ಉಲ್ಲಂಘಿಸಿಲ್ಲ. ಎಸ್ ಪಿ ಪಿ ಸರ್ಜರಿ ಮಾಡಿಸಿಲ್ಲವೆಂದು ಆರೋಪಿಸಿದ್ದಾರೆ. ನಾನು ವೈದಿಕೀಯ ವರದಿ ಆಧರಿಸಿಯೇ ವಾದ ಮಂಡಿಸಿದ್ದೆ. ನವೆಂಬರ್ 21ರಂದು ವೈದ್ಯರು ಮತ್ತೊಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸರ್ಜರಿಗಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ನವೆಂಬರ್ 6 ರಂದು ಕೆಲ ಚಿಕಿತ್ಸೆಗಳನ್ನು ನೀಡಲಾಗಿದೆ ಡಿಸೆಂಬರ್ 11ಕ್ಕೆ ಸರ್ಜರಿ ಮಾಡಲಾಗುತ್ತದೆ.