ಬೆಂಗಳೂರು : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಅವರ ಉದ್ಯಮದ ಪಾಲುದಾರರೇ ಪ್ರಚೋದನೆ ನೀಡಿದ್ದಾರೆ ಎಂದು ಪತ್ನಿ ರೇಖಾ ಆರೋಪಿಸಿ ಕೇಸ್ ದಾಖಲಿಸಿದ್ದರು. ಈ ಕುರಿತು, ಉದ್ಯಮದ ಪಾಲುದಾರರಾದ ವಿ.ಎಸ್ ಸುರೇಶ್, ಎಸ್ ಪಿ ಹೊಂಬಣ್ಣ, ಸುಧೀಂದ್ರ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಹೌದು ಉದ್ಯಮದ ಪಾಲುದಾರರಾದ ವಿ.ಎಸ್ ಸುರೇಶ್, ಎಸ್ ಪಿ ಹೊಂಬಣ್ಣ, ಸುಧೀಂದ್ರ ವಿರುದ್ಧ ಕೇಸ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆತ್ಮಹತ್ಯೆ ಮಾಡಿಕೊಂಡ ತಿಂಗಳ ಬಳಿಕ ಸಿಕ್ಕಪತ್ರ ಆಧರಿಸಿ ಕೇಸ್ ದಾಖಲಿಸಲಾಗಿತ್ತು. ಆತ್ಮಹತ್ಯೆ ಪತ್ರದಲ್ಲಿ ಪ್ರಚೋದನೆ ಬಗ್ಗೆ ಆರೋಪವಿಲ್ಲ ಕೇಸ್ ರದ್ದುಪಡಿಸುವಂತೆ ಮೂವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಹೈಕೋರ್ಟ್ ವಿಚಾರಣೆ ನಡೆಸಿ ಪ್ರಕರಣವನ್ನು ರದ್ದುಪಡಿಸಿ ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ. ಆದೇಶದಲ್ಲಿನ ಅಭಿಪ್ರಾಯ ಇವರ ನಡುವಿನ ಬೇರೆ ವಿವಾದಗಳಿಗೆ ಅನ್ವಯವಾಗುವುದಿಲ್ಲ ಎಂದು ನ್ಯಾ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ.
ಪ್ರಕರಣ ಹಿನ್ನೆಲೇ?
ಉದ್ಯಮದಲ್ಲಿ ಆದ ನಷ್ಟದಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಕಳೆದ ಮೇ 24 ರಂದು ಸುದ್ದಿಗೋಷ್ಠಿ ಕರೆದು ಮಾತನಾಡಿ, ಸೌಂದರ್ಯ ಜಗದೀಶ್ ಅವರ ಪಾಲುದಾರರು ಕೆಲವರ ವಿರುದ್ಧ ಆರೋಪಗಳನ್ನು ಮಾಡಿದ್ದರು.
ಸೌಂದರ್ಯ ಜಗದೀಶ್ ಅವರ ಉದ್ಯಮ ಪಾಲುದಾರರಾಗಿದ್ದ ಸುರೇಶ್, ಹೊಂಬಣ್ಣ, ಸುಧೀಂದ್ರ ಅವರುಗಳು ಪತಿಗೆ ಮೋಸ ಮಾಡಿದ್ದಾರೆ. ಅವರು ನೀಡಿದ ಟಾರ್ಚರ್ನಿಂದಾಗಿಯೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ರೇಖಾ ಆರೋಪ ಮಾಡಿದ್ದರು. ಸೌಂದರ್ಯ ಜಗದೀಶ್ ಬರೆದಿರುವ ಡೆತ್ ನೋಟ್ ಸಿಕ್ಕಿದೆ ಎಂದು ರೇಖಾ ಹೇಳಿದ್ದು, ಅದರಲ್ಲಿ ಅವರು ಅವರ ಪಾಲುದಾರರ ವಿರುದ್ಧ ಆರೋಪ ಮಾಡಿದ್ದಾರೆ. ಅದನ್ನೆಲ್ಲ ನಾನು ತನಿಖಾಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದು ಆರೋಪಿಸಿದ್ದರು.