ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ವಿಚಾರಣೆ ನಡೆಸಿದ ಜಡ್ಜ್ ಜನವರಿ 17ರಂದು ಬಿಎಸ್ ಯಡಿಯೂರಪ್ಪ ಪರ ವಕೀಲರ ವಾದಕ್ಕೆ ವಿಚಾರಣೆ ನಿಗದಿ ಪಡಿಸಿ, ಬಿಎಸ್ ಯಡಿಯೂರಪ್ಪ ಅವರ ಖುದ್ದು ಹಾಜರಾತಿಗೆ ನೀಡಿದ ವಿನಾಯಿತಿ ವಿಸ್ತರಿಸಿ ಆದೇಶ ಹೊರಡಿಸಿದರು.
ವಿಚಾರಣೆಯ ವೇಳೆ ಪ್ರಾಸಿಕ್ಯೂಷನ್ ಪರವಾಗಿ ಎಸ್‍ಪಿಪಿ ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಪೊಲೀಸರಿಗೆ ಬಾಲಕಿಯ ಹೇಳಿಕೆ ಉಲ್ಲೇಖಿಸಿ ವಾದ ಮಂಡನೆ ಆರಂಭಿಸಿದರು. ಹಳೆ ಪೋಕ್ಸೋ ಕೇಸ್ ಬಗ್ಗೆ ನ್ಯಾಯಕ್ಕಾಗಿ ಬಾಲಗೆಯೊಂದಿಗೆ ತಾಯಿ ತೆರಳಿದ್ದರು. ಆಗ ಬಿ ಎಸ್ ಯಡಿಯೂರಪ್ಪ ಬಾಲಕಿಯನ್ನು ರೂಮ್ ಒಳಗೆ ಕರೆದೋಯ್ದು ಲಾಕ್ ಮಾಡಿದರು. ಅವರು ಬಾಲಕಿಯ ಬಳಿ ಬಂದು ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವೇ ಎಂದರು.
ಹಿಂದಿನ ಪೋಕ್ಸೋ ಕೇಸ್ ನಡೆದಾಗ ನಿನಗೆ ವಯಸ್ಸು ಎಷ್ಟು ಎಂದು ಕೇಳಿದರು. ಆರೂವರೆ ವರ್ಷ ಎಂದು ನಾನು ಉತ್ತರಿಸಿದೆ. ಅದಾದ ಮೇಲೆ ಅಸಭ್ಯವಾಗಿ ವರ್ತಿಸಿದರು ಎಂದು ವಾದಿಸಿದರು. ಈ ವೇಳೆ ಆ ವಾಕ್ಯಗಳು ಓದುವಂತಿಲ್ಲ ಓದಬೇಡಿ ಎಂದು ಜಡ್ಜ್ ವಕೀಲರಿಗೆ ಸೂಚನೆ ನೀಡಿದರು.ಬಾಲಕಿ ಪ್ರತಿರೋಧಿಸಿದಾಗ ಬಿಎಸ್ ಯಡಿಯೂರಪ್ಪ ಬಾಲಕಿಗೆ ಹಣ ನೀಡಿದ್ದಾರೆ. ಹೊರಬಂದಬಳಿಕ ತಾಯಿಗೂ ಕೂಡ ಹಣ ನೀಡಿದ್ದಾರೆ. ಬಾಲಕಿ ಅಲ್ಲಿಂದ ತೆರಳಿದ ಮೇಲೆ ತಾಯಿಯೊಂದಿಗೆ ವಿಷಯ ತಿಳಿಸಿದ್ದಾಳೆ. ವಕೀಲ ಹಿರೇಮಠರೊಂದಿಗೆ ಮಾತನಾಡಿ ಘಟನೆಯ ಮಾಹಿತಿ ನೀಡಿದರು.
ನಂತರ ಬಿಎಸ್ ಯಡಿಯೂರಪ್ಪ ನೀಡಿದ್ದ ನಗದು ಹಣ ದೊಂದಿಗೆ ಸೆಲ್ಫಿ ತೆಗೆದುಕೊಂಡರು ನಂತರ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಮತ್ತೆ ಬಿಎಸ್ ಯಡಿಯೂರಪ್ಪ ಮನೆಗೆ ಹೋದರು. ಈ ವರ್ತನ ಬಗ್ಗೆ ಯುವತಿಯ ತಾಯಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿದ್ದಾರೆ. ಒಳಗಡೆ ಕರೆದುಕೊಂಡು ಹೋಗಿ ಏನು ಮಾಡಿದ್ದೀರಿ ಎಂದು ಬಿಎಸ್ ಯಡಿಯೂರಪ್ಪ ಅವರಿಗೆ ತಾಯಿ ಪ್ರಶ್ನಿಸಿದ್ದಾಳೆ.
ಡಿಕೆ ಶಿವಕುಮಾರ್ ಅವರೊಂದಿಗೆ ಕೂಡ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಅವರೊಂದಿಗೆ ಬಿಎಸ್ ಯಡಿಯೂರಪ್ಪ ಮಾತನಾಡಿದ್ದಾರೆ. ಬಾಲಕಿ ತಾಯಿಯ ಮೊಬೈಲ್ ನಂಬರ್ ಅನ್ನು ಕೂಡ ಬಿಎಸ್ ಯಡಿಯೂರಪ್ಪ ಪಡೆದುಕೊಂಡಿದ್ದಾರೆ.ಇವೆಲ್ಲವೂ ಕೂಡ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.ಬಿಎಸ್ ಯಡಿಯೂರಪ್ಪ ಡಿಕೆ ಶಿವಕುಮಾರ್ ರಾಜಕೀಯ ವಿರೋಧಿಗಳೆಂದು ತಿಳಿದಿದ್ದೆ. ಬಿಎಸ್ ಯಡಿಯೂರಪ್ಪ ದೋಣಿಯನ್ನು ಮೊಬೈಲ್ ರೆಕಾರ್ಡ್ ನೊಂದಿಗೆ ಪರೀಕ್ಷಿಸಿದ್ದಾರೆ. ಇದು ಹೊಂದುತ್ತಿದೆ ಎಂದು ಎಫ್ ಎಸ್ ಎಲ್ ನಲ್ಲಿ ವರದಿ ಬಂದಿದೆ ಎಂದು ಪ್ರಾಸಿಕ್ಯೂಶನ್ ಪರ ಎಸ್ ಪಿ ಪಿ ರವಿಕುಮಾರ್ ವಾದ ಮಂಡಿಸಿದರು.
ಬಿಎಸ್ ಯಡಿಯೂರಪ್ಪ ವಿಚಾರಣೆಗೆ ಒಳಪಡಿಸಿದಾಗ ಭೇಟಿ ಮಾಡಿದನ್ನು ಒಪ್ಪಿಕೊಂಡಿದ್ದಾರೆ 9 ವರ್ಷಗಳ ಹಿಂದೆ ಸಂಬಂಧಿಸಿದ ಅತ್ಯಾಚಾರದ ಬಗ್ಗೆ ನ್ಯಾಯ ಕೇಳಿದ್ದರು. ಮಗಳಿಗೆ ಎಷ್ಟು ಹಣ ರೂಮಿನಲ್ಲಿ ಕೊಟ್ಟಿದ್ದೀರಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ.
ಅಂದು 9 ಸಾವಿರ ರೂಪಾಯಿ ಕೊಟ್ಟಿರುವುದನ್ನು ಒಪ್ಪಿಕೊಂಡಿದ್ದಾರೆ. 2 ಲಕ್ಷ ಹಣವನ್ನು ಏಕೆ ನೀಡಿದಿರಿ ಎಂಬ ಪ್ರಶ್ನೆಗೆ ಸಾಲವಾಗಿ ನೀಡಲಾಗಿದೆ. ಆಕೆಗೆ ಸಮಸ್ಯೆ ಇದ್ದಿದ್ದರಿಂದ ಸಾಲವಾಗಿ ಕೊಡಲು ರುದ್ರೇಶ್ ಗೆ ಹೇಳಿದ್ದೆ.
ಚೆಕ್ ಮಾಡಿದೆ ಎಂದಿರುವುದನ್ನು ಬಿಎಸ್ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ. ಕೇಸ್ ಬಗ್ಗೆ ಚೆಕ್ ಮಾಡಿದ ಎಂದು ಬಿಎಸ್ ವೈ ಉತ್ತರಿಸಿದ್ದಾರೆ. ಏನು ಚೆಕ್ ಮಾಡಿರಬಹುದು ಎಂಬುದು ಎವಿಡೆನ್ಸ್ ವೇಳೆ ತಿಳಿಯಬೇಕು ಎಂದು ಎಸ್‌ಪಿಪಿ ಪರ ರವಿವರ್ಮ ಕುಮಾರ್ ವಾದ ಮಂಡಿಸಿದರು.