ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಗವರ್ನರ್ ಗೆಹ್ಲೊಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟಿನಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.9 ರಂದು ಮುಂದೂಡಿ ಮುಖ್ಯ ನಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿತು.
ಹೌದು ಇಂದು ಪ್ರಾಸಿಕ್ಯೂಷನ್ ಗೆ ಗವರ್ನರ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್ ಸುದೀರ್ಘವಾದಂತ ವಾದವನ್ನು ಮಂಡಿಸಿದರು. ನಾನು ಕಾನೂನು ವಾಸ್ತವಂಶದ ಪ್ರಶ್ನೆಗಳ ಬಗ್ಗೆ ವಾದಿಸುತ್ತೇನೆ ಎಂದು ಹೇಳಿ ವಾದ ಆರಂಭಿಸಿದರು.
ವಾಕ್ಚಾತುರ್ಯ ವ್ಯಂಗ್ಯದಿಂದ ವಾದಿಸಲು ಬಯಸುವುದಿಲ್ಲ. ಭ್ರಷ್ಟಾಚಾರ ತಡೆ ಕಾಯಿದೆ ಸೆ.17 ಆದರಿಸಿ ವಾದಿಸುತ್ತೇನೆ. ಪೊಲೀಸ್ ಅಧಿಕಾರಿ ಯಾವುದೇ ಮನವಿ ಕೂಡ ಸಲ್ಲಿಸುವ ಅಗತ್ಯವಿಲ್ಲ. ಮನವಿ ಸಲ್ಲಿಸದೆಯು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು ಎಂದು ವಾದಿಸಿದರು.
ಅನುಚಿತ ಅನುಕೂಲ ಪಡೆಯಲು ಪ್ರಭಾವ ಬಳಸಿದರೆ ಅಪರಾಧವಾಗುತ್ತದೆ. ಪಡೆಯುವ ಅನುಕೂಲ ಕಾನೂನು ಬಾಹಿರವಾಗಿಲ್ಲದಿದ್ದರೂ ಕೂಡ ಅದು ಅಪರಾಧವೇ.ವೈಯಕ್ತಿಕ ಪ್ರಭಾವ ಬಳಸಿದರು ಕೂಡ ಅದು ಸೆಕ್ಷನ್ 7ರ ಅಡಿಯಲ್ಲಿ ಅದು ಅಪರಾಧ. ಒಬ್ಬ ಸಚಿವ ತನ್ನ ಇಲಾಖೆಯಲ್ಲದೆ ಬೇರೆಡೆ ಪ್ರಭಾವ ಬೀರಿದರು ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಈ ಕಾಯ್ದೆಯನ್ನು ರಚಿಸಲಾಗಿದೆ ಎಎಂದು ಕೆಜಿ ರಾಘವನ್ ವಾದಿಸಿದರು.
ಈ ಬಗ್ಗೆ ಈಗಾಗಲೇ ಹಿಂದಿನ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಪೋಲಿಸ್ ಅಧಿಕಾರಿಯ ಮನವಿ ಸಲ್ಲಿಸುವ ಅಗತ್ಯವಿಲ್ಲ.ಸೆಕ್ಷನ್ 7ಸಿ ಅನ್ನು ಓದಲು ಬಯಸುತ್ತೇನೆ ಎಂದು ಹೇಳಿ ಅನಗತ್ಯ ಲಾಭ ಅನುಕೂಲ ಪಡೆಯುವುದು ಕಾಯ್ದೆಯ ವ್ಯಾಪ್ತಿಯಲ್ಲಿದೆ. ಕಾನೂನು ಬಾಹಿರವಾಗಿಲ್ಲದಿದ್ದರೂ ಪ್ರಭಾವಗೊಳಿಸಿ ಲಾಭ ಪಡೆದರೆ ಅಪರಾಧ. ಈ ವೇಳೆ ನಿಮ್ಮ ವಾದ ಸೆಲ್ಫ್ ಗೋಲ್ ಆಗಬಹುದು ಎಂದು ನ್ಯಾಯಾಧೀಶರು ತಿಳಿಸಿದರು.
ಸಾರ್ವಜನಿಕರಿಗೆ ಶುದ್ಧ ಆಡಳಿತದಲ್ಲಿ ನಂಬಿಕೆ ಬರಬೇಕು. ಇದು ಇಬ್ಬರ ನಡುವಿನ ವಿವಾದದ ವಿಷಯವಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಾಗಿದೆ. ಮುಡಾ ಹಗರಣದ ಬಗ್ಗೆ ತನಿಖೆಗೆ ಆಯೋಗದ ರಚನೆಯಾಗಿದೆ. ಆಯೋಗದ ರಚನೆಯ ಬಗ್ಗೆ ನಿಮಗೆ ಸಮಾಧಾನವಿದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಇಲ್ಲ ಆಯೋಗದ ವರದಿಗೆ ಮಹತ್ವವಿಲ್ಲ ಅದು ಜಾರಿಯಾಗಿಲ್ಲ ಎಂದು ಕೆಜಿ ರಾಘವನ್ ತಿಳಿಸಿದರು. ಆಯೋಗದ ವರದಿಯವರೆಗೆ ಈ ತನಿಖೆಗಳ ಅಗತ್ಯವಿದೆಯೇ? ನಾವು ಆಯೋಗದ ವರದಿ ಜಾರಿಯಾಗುವಂತೆ ಮಾಡಿದರೆ? ಎಂದು ಪ್ರಶ್ನಿಸಿದರು. ಸರ್ಕಾರವೇ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚನೆ ಮಾಡಿದೆ.
ನಿಂಗ ಎಂಬುವವರಿಗೆ ಈ ಜಮೀನು ಮಂಜೂರಾಗಿತ್ತು. ನಿಂಗನಿಗೆ ಮೂವರು ಮಕ್ಕಳು. ಮಲ್ಲಯ್ಯ, ಮೈಲಾರಯ್ಯ ದೇವರಾಜು. ಮಲ್ಲಯ್ಯ ದೇವರಾಜು ತಮ್ಮ ಹಕ್ಕನ್ನು ಮೈಲಾರಪ್ಪನಿಗೆ ಬಿಟ್ಟುಕೊಟ್ಟಿದ್ದಾರೆ ಹೀಗಾಗಿ ದೇವರಾಜುವಿಗೆ ಈ ಜಮೀನಿನ ಮೇಲೆ ಹಕ್ಕಿರಲಿಲ್ಲ. ಮೂರ್ ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4800 ಚದರ ಅಡಿ ಪರಿಹಾರವಿತ್ತು. 1994ರ ನಿಯಮದ ಪ್ರಕಾರ ಎರಡು ಸೈಟಿಗೆ ಅಷ್ಟೇ ಅವಕಾಶ ಇತ್ತು ಎಂದು ವಾದಿಸಿದರು.
ಸರ್ಕಾರವೇ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚನೆ ಮಾಡಿದೆ. ಹೀಗಾಗಿ ರಾಜ್ಯಪಾಲರು 17 ಎ ಅಡಿ ಅನುಮತಿ ನೀಡಿರುವುದು ಸರಿಯಾಗಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ಎಂದು ದೂರುದಾರರ ಪರ ಕೆ ಜಿ ರಾಘವನ್ ವಾದ ಮಂಡಿಸಿದರು.
ಡಿನೋಟಿಫಿಕೇಶನ್ ಕೇಳಿ ಅರ್ಜಿ ಸಲ್ಲಿಸಿದ್ದು ದೇವರಾಜು. ಆದರೆ ದೇವರಾಜು ಆಗ ಜಮೀನಿನ ಮಾಲೀಕನೇ ಅಲ್ಲ. 20 /8/ 1997 ರಂದು ಅಂತಿಮ ಭೂಸ್ವಾಧೀನ ಅಧಿಸೂಚನೆಯಾಗುತ್ತದೆ. 30/ 03 /1998 ರಂದು ಜಮೀನಿನ ಪರಿಹಾರ ಕೂಡ ನಿಗದಿಯಾಯಿತು. 18 /5 /1998 ರಂದು 3.16 ಜಮೀನು ಡಿನೋಟಿಫಿಕೇಶನ್ ಮಾಡಲಾಯಿತು. 2004ರ ಆಗಸ್ಟ್ 25 ರಂದು ದೇವರಾಜು ಜಮೀನನ್ನು ಮಲ್ಲಿಕಾರ್ಜುನನಿಗೆ ಮಾರಾಟ ಮಾಡುತ್ತಾನೆ ನಂತರ ಭೂ ಪರಿವರ್ತನೆಗೂ ಮುನ್ನ ನಿವೇಶನ ಸ್ಥಳ ತನಿಖೆ ಮಾಡಲಾಯಿತು.
ಇದೊಂದೇ ಜಮೀನು ಡಿನೋಟಿಫೈ ಮಾಡಲಾಗಿದೆಯಾ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ. ಕೆ ಜಿ ರಾಘವನ್ ಅವರು, ಹೌದು ನಮ್ಮ ಮಾಹಿತಿಯಂತೆ ಇದೊಂದೇ ಡಿನೋಟಿಫೈ ಮಾಡಲಾಗಿದೆ. ಭೂ ಪರಿವರ್ತನೆ ಬೆಳಗಾಗಲೇ ಭೂಸ್ವಾಧೀನವಾಗಿತ್ತು. ಈ ಅಕ್ರಮಗಳ ಬಗ್ಗೆ ತನಿಖೆಯ ಅಗತ್ಯವಿದೆ.ತನಿಖೆ ತಡೆಹಿಡಿಯಲು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇಕೆ ಎಂಬುವುದೇ ಅಚ್ಚರಿ ಮೂಡಿಸಿದೆ. ಸಾಮಾನ್ಯ ದುಡ್ಡು ಬಂದರೂ ಇಂತಹ ವಿಚಾರದಲ್ಲಿ ತನಿಖೆ ಆಗಬೇಕು ಎಂದು ವಾದಿಸಿದರು.
ಈ ಪ್ರಕರಣದಲ್ಲಿ ಸಂದೇಹದ ಮೊನೆ ಇದೆ. ಇದು ಅವಸರದಲ್ಲಿ ಮೂಡಿದ ಸಂದೇಹವಲ್ಲ ಅಷ್ಟೇ ಅಲ್ವಾ? ಇದು ನಗಣ್ಯ ವಿಚಾರಕ್ಕೆ ಮೂಡಿದ ಸಂದೇಹವಲ್ಲ. ಡಿನೋಟಿಫೈ ಆದ ಜಮೀನಿನಲ್ಲಿ ನಿವೇಶನ ಹಂಚಿಕೆಯಾಗಿತ್ತು. 2010ರಲ್ಲಿ ಈ ಜಮೀನು ಮಲ್ಲಿಕಾರ್ಜುನ್ ಸಿಎಂ ಪತ್ನಿಗೆ ದಾನವಾಗಿ ನೀಡಿದ್ದರು. ಈ ಕೇಸಿನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದರು. ಸಾಮಾನ್ಯ ಪ್ರಜೆಯಾಗಿದ್ದರೆ ಬದಲಿ ನಿವೇಶನ ನೀಡುತ್ತಿರಲಿಲ್ಲ. ನಿಮ್ಮ ಮಾಲೀಕತ್ವ ಸಾಬೀತುಪಡಿಸಿ ಎಂದು ಕೇಳುತ್ತಿದ್ದರು ಎಂದು ಕೆಜಿ ರಾಘವನ್ ವಾದಿಸಿದರು.
ಸ್ವಾಧೀನವಾಗಿ ಹಣ ಡೆಪಾಸಿಟ್ ಆದಮೇಲೆ ಬದಲಿ ನೀವೇಶನ ಪ್ರಶ್ನೆ ಇಲ್ಲ. 2014 ಜೂನ್ 23 ರಂದು ಬದಲಿ ನಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಪತ್ನಿ ಅರ್ಜಿ ಸಲ್ಲಿಸುತ್ತಾರೆ 60 : 40 ಗೆ ಅರ್ಜಿ ಸಲ್ಲಿಸಬಹುದಾಗಿತ್ತೆ? ಎಂದು ಈ ವೇಳೆ ಜಡ್ಜ್ ಪ್ರಶ್ನಿಸುತ್ತಾರೆ. 60:40 ಅಲ್ಲ ಒಂದು ಸೈಟು ಕೂಡ ಅರ್ಹತೆ ಇರಲಿಲ್ಲ. 50 : 50ರ ಅಡಿ 14 ನಿವೇಶನ ಹಂಚುವ ನಿಯಮ ಆಗ ಇರಲಿಲ್ಲ ಎಂದು ಕೆಜಿ ರಾಘವನ್ ವಾದಿಸಿದರು.
ಒಂದು ತಪ್ಪಾದರೆ ಓಕೆ ಪದೇ ಪದೇ ತಪ್ಪಾದರೆ ದುರುದ್ದೇಶವಿದೆ ಎಂದರ್ಥ. 1998 ರಲ್ಲಿ 3.16 ಎಕರೆಗೆ 3.24 ಲಕ್ಷ ರೂಪಾಯಿ ಪರಿಹಾರ ನಿಗದಿ ಆಗಿತ್ತು. ಆದರೆ ಸಿಎಂ ಪತ್ನಿಗೆ 3.24 ಲಕ್ಷ ರೂಪಾಯಿಯ ಪರಿಹಾರ ಕೊಡುತ್ತಿದ್ದೀರಾ. 14 ಸೈಟ್ ಮೌಲ್ಯ ಎಷ್ಟಿದೆ ಸುಣ್ಣಕ್ಕೆ ಬೆಣ್ಣೆಯ ಬೆಲೆ ನೀಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಹೀಗಾಗಿಯೇ ಈ ಬಗ್ಗೆ ತನಿಖೆಯಾಗಬೇಕಾದ ಅಗತ್ಯತೆ ಇದೆ. 1998ರ ಭೂ ಸ್ವಾಧೀನಕ್ಕೆ 2015ರ ನೋಟಿಫಿಕೇಶನ್ ಅನ್ವಯಿಸಿದ್ದೀರಿ.ಮಾಲೀಕರೇ ಅಲ್ಲದವರಿಗೆ ಡಿನೋಟಿಫಿಕೇಶನ್ ಮಾಡಿದ್ದೀರಿ. ಕಡಿಮೆ ಬೆಲೆಯ ಜಮೀನಿಗೆ ಅತಿ ಹೆಚ್ಚಿನ ಪರಿಹಾರ ನೀಡಿದ್ದೀರಿ. ತನಿಖೆ ನಡೆಸಲು ಇನ್ನೆಷ್ಟು ಸಂಗತಿಗಳು ಬೇಕು? ಸಿಎಂ ಮತ್ತು ಈ ಘಟನೆಗೂ ಸಂಬಂಧವೇನು ಎಂಬ ಪ್ರಶ್ನೆ ಕೇಳಿದ್ದೀರಿ. ಎಲ್ಲಾ ಘಟನೆ ನಡೆದಾಗ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು ಎಂದು ಕೆಜಿ ರಾಘವನ್ ವಾದಿಸಿದರು.
ಮುಡಾ ಸೈಟ್ ಪಡೆಯೋದ್ರಲ್ಲಿ ಸಿಎಂ ಪ್ರಭಾವ ಬಳಕೆ ಆರೋಪದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಾತ್ರವಿದೆ. ಅಧಿಕಾರ ದುರುಪಯೋಗ ಆಗಿದೆ.ಈ ಕುರಿತು ತನಿಖೆ ಅವಶ್ಯಕತೆ ಇದೆ. ಸಿಎಂ ಪತ್ನಿಗೆ ಬೇಕಾದಂತಹ ನಿಯಮಗಳನ್ನು ಬದಲಾಯಿಸಿಕೊಂಡಿದ್ದಾರೆ. 2017ರಲ್ಲಿ 50:50ರ ಅಡಿ ನಿವೇಶನ ಕೊಡಲು ಸಮ್ಮತಿ ನೀಡಲು ನಿರ್ಣಯಿಸಲಾಗಿದೆ.
ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ತಾವು ಸಿಎಂ ಗೆ ಲಿಂಕ್ ಏನಿದೆ ಹೇಳಿ ಎನ್ನುತ್ತಿದ್ದೀರಿ. ಲಿಂಕ್ ಇದೆ. 12.01.2022 ರಲ್ಲಿ 50 : 50 ರ ಅಡಿಯಲ್ಲಿ 14 ನಿವೇಶನಗಳನ್ನು🙈 ಹಂಚಿಕೆ ಮಾಡಲಾಯಿತು. ನಂತರ ಈ 50:50 ರ ಅಡಿ ನಿವೇಶನ ಹಂಚಿಕೆ ನಿಲ್ಲಿಸಲಾಗಿದೆ ಎಂಬುದು ನಿಜವೇ? 50 : 50ರ ಅಡಿ ಬೇರೆಯವರಿಗೂ ಜಮೀನು ಹಂಚಿಕೆ ಮಾಡಲಾಗಿದೆಯೇ? ಬೇರೆಯವರಿಗೆ ಹಂಚಿಕೆ ಮಾಡಿದ ಬಗ್ಗೆ ತಿಳಿದಿಲ್ಲ ಎಂದರು.
ಮುಡಾ ಹಗರಣಗಳ ಸಂಬಂಧ ಸರ್ಕಾರ ಆಯೋಗ ರಚಿಸಿದೆ. ಈ ಕೇಸಿಗೂ ಮುಡಾ ಕೇಸಿಗೂ ಸಂಬಂಧವಿದೆಯೇ ಎಂದು ಜಡ್ಜ್ ಪ್ರಶ್ನಿಸಿದಾಗ, ಸಿಎಂ ಪತ್ನಿಯ ನಿವೇಶನ ಹಂಚಿಕೆ ಬಗ್ಗೆ ಆಯೋಗ ರಚಿಸಿಲ್ಲ. ಮುಡಾದ ಸಾಮಾನ್ಯ ಆಡಳಿತಾತ್ಮಕ ಕ್ರಮಗಳ ತನಿಖೆಗೆ ಆಯೋಗ ರಚನೆ ಮಾಡಲಾಗಿದೆ ಎಂದು ಜಡ್ಜ್ ಗಮನಕ್ಕೆ ತಂದರು.
ಸಿಎಂ ಪತ್ನಿಗಾಗಿ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಮುಡಾ ಸೈಟ್ ಪಡೆಯಲು ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ. ಮುಡಾ ಹಗರಣಗಳ ಸಂಬಂಧ ಸರ್ಕಾರ ಆಯೋಗ ರಚಿಸಿದೆ. ಈ ಕೇಸಿಗೆ ಮುಡಾ ತನಿಖೆಯ ಆಯೋಗಕ್ಕೂ ಸಂಬಂಧವಿದೆಯೇ ಎಂದು ಜಡ್ಜ್ ಕೇಳಿದಾಗ, ಸಿಎಂ ಪತ್ನಿಯ ನಿವೇಶನ ಹಂಚಿಕೆಯ ಬಗ್ಗೆ ಆಯೋಗ ರಚಿಸಿಲ್ಲ. ಆದರೆ ಮೂಡಾದ ಸಾಮಾನ್ಯ ಆಡಳಿತಾತ್ಮಕ ಕ್ರಮಗಳ ತನಿಖೆಗೆ ಆಯೋಗ ರಚಿಸಲಾಗಿದೆ ಎಂದರು.
ಸಿಎಂಗೂ ಮುಡಗು ಏನಾದರು ಸಂಬಂಧವಿದೆ ಅಂದರೆ ಹೌದು ಎನ್ನುತ್ತೇನೆ. ಸಿಎಂ ಹಾಗೂ ೨೦೧೭ ರಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಕ್ಕೂ ಸಂಬಂಧವಿದೆ. 2015 ರಲ್ಲಿ 50 : 50 ಹಂಚಿಕೆ ಮಾಡುವಂತೆ ನಿಯಮ ರೂಪಿಸಲಾಯಿತು. ಸಿಎಂ ಪತ್ನಿ 23 6 2014ರಲ್ಲಿ ಮನವಿ ಸಲ್ಲಿಸಿದರು. 1998ರ ಭೂ ಸ್ವಾಧೀನಕ್ಕೆ 2015 ಅನುಪಾತ 50 : 50 ನಿಯಮ ಅನ್ವಯಿಸಲು ಸಾಧ್ಯವೇ? 2017ರ ಡಿಸೆಂಬರ್ ತಿಂಗಳಿನಲ್ಲಿ ಸಿಎಂ ಪತ್ನಿಗೆ 50 : 50 ಹಂಚಿಕೆ ನಿರ್ಣಯಿಸಲಾಯಿತು ಎಂದು ವಾದಿಸಿದರು.
ಒಂದು ಸೈಟಿಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ನೀಡಲಾಗಿದೆ. ಇಂತಹ ಕೃತ್ಯಕ್ಕೆ ತನಿಖೆ ಅವಶ್ಯಕತೆ ಇಲ್ಲವೆಂದು ಹೇಳಲು ಸಾಧ್ಯವೇ? 2017ರ ನಿರ್ಣಯಕ್ಕೂ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದದ್ದಕ್ಕೂ ಸಂಬಂಧವಿದೆ ಎಂದು ಕೆಜೆ ರಾಘವನ್ ನವರು ತಮ್ಮ ವಾದವನ್ನು ಸುಧೀರ್ಘ ವಾದ ಮಂಡಿಸಿದರು.
ಮುಡಾ ಹಗರಣದ ಬಗ್ಗೆ ಖಾಸಗಿ ಈ ವೇಳೆ ಜಡ್ಜ್ ಪ್ರತಿಕ್ರಿಯೆ ನೀಡಿ ದೂರು ದಾಖಲಿಸಲಾಗಿದೆ. ರಾಜ್ಯಪಾಲರ ಅನುಮತಿಯ ಮಾನ್ಯತೆ ಬಗ್ಗೆ ವಿಚಾರಣಾ ನ್ಯಾಯಾಲಯ ಪರಿಶೀಲಿಸಬಹುದು. ಹೈಕೋರ್ಟಿಗೆ ರಾಜ್ಯಪಾಲರ ಆದೇಶದ ಬಗ್ಗೆ ತೀರ್ಪು ನೀಡುವ ಅಧಿಕಾರವಿದೆ ಎಂದು ಜಡ್ಜ್ ಕೆಜೆ ರಾಘವನ್ ಅವರಿಗೆ ಪ್ರತಿಕ್ರಿಯೆ ನೀಡಿದರು.
ಇದೆ ವೇಳೆ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.ಅದಕ್ಕೆ ಜಡ್ಜ್ ಹಬ್ಬಕ್ಕೂ ಮೊದಲು ವಾದ ಮಂಡನೆ ಮುಗಿಸಿಬಿಡಿ. ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಅಡ್ವಕೇಟ್ ಜನರಲ್ ಅಭಿಪ್ರಾಯದ ಬಗ್ಗೆಯೂ ವಾದಿಸಬೇಕಿದೆ. ಹಬ್ಬವಿದೆ ರಜೆ ಗಳಿವೆ ಒಂದು ವಾರ ಕಾಲಾವಕಾಶ ನೀಡಿ ಎಂದು ಎಜೆ ಶಶಿಕಿರಣ್ ಶೆಟ್ಟಿ ಜಡ್ಜ್ ಗೆ ಮನವಿ ಮಾಡಿದರು.