ಹಾವೇರಿ : ಅತಿಯಾದ ವೇಗದ ಚಾಲನೆ ಜೀವಕ್ಕೆ ಅಪಾಯಕಾರಿ ಎಂಬಂತೆ ಮಗನೋಬ್ಬ ಬೈಕಿನಲ್ಲಿ ತನ್ನ ತಾಯಿಯನ್ನು ಕೂಡಿಸಿಕೊಂಡು ತೆರಳುತ್ತಿದ್ದ ವೇಳೆ ಟೋಲ್ ಗೇಟ್ ಬಳಿ ತಡೆಗಂಬ ಬಡಿದು ತಾಯಿ ಸ್ಥಳದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿ ನಡೆದಿದೆ.
ಹೌದು ಬೈಕ್ ಸವಾರನ ನಿರ್ಲಕ್ಷಕ್ಕೆ ಆತನ ತಾಯಿ ಬಲಿಯಾಗಿದ್ದಾಳೆ. ಟೋಲ್ ಗೇಟ್ ಹಾಕಿದರೂ ಕೂಡ ಸವಾರ ನಿರ್ಲಕ್ಷದಿಂದ ಬೈಕ್ ಚಾಲನೆ ಮಾಡಿದ್ದಾನೆ. ಇ ವೇಳೆ ಹಿಂದೆ ಕುಳಿತಿದ್ದ ಸವಾರನ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಣೇಬೆನ್ನೂರು ತಾಲೂಕಿನ ಚಳಗೇರಿಯಲ್ಲಿ ಈ ಒಂದು ಘಟನೆ ನಡೆದಿದೆ ಟೋಲ್ ಗೇಟ್ ತಡೆಗಂಬ ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.