ಬೆಳಗಾವಿ : ಉತ್ತರಾದಿಯ ಕುರಿತು ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೆ ಇದೀಗ ಉತ್ತರಧಿಕಾರಿಯ ಬಗ್ಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿಯಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಸತೀಶ್ ಜಾರಕಿಹೊಳಿ ಮುನ್ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದು ಲೀಡರ್ ಯಾರು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಹಿಂದ ಸಂಘಟನೆ ಮುನ್ನಡೆಸುವ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೇ ಎಂದು ಸಂಘಟನೆ ಮುನ್ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ಸೈದಾಂತಿಕವಾಗಿ ಅಹಿಂದ ಸಂಘಟನೆ ನಾನು ಮಾಡುತ್ತಿದ್ದೆ ಆಮೇಲೆ ಇದೀಗ ಸತೀಶ್ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ ಅಂತ ಯತೀಂದ್ರ ಹೇಳಿದರೆ ಹೊರತು ಅವರೆ ಲೀಡರ್ ಆಗಬೇಕು ಅಂತ ಹೇಳಿಲ್ಲ. ಯಾರನ್ನ ಲೀಡರ್ ಮಾಡಬೇಕು ಅಂತ ಹೇಳುವುದು ಹೈಕಮಾಂಡ್ ನಾವು ಮಾಡಲ್ಲ ಯತೀಂದ್ರನು ಮಾಡಲ್ಲ ಯಾರು ಮಾಡಲ್ಲ ಎಂದರು.








