ನವದೆಹಲಿ : ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಧಬಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಪಕ್ಷ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಒಟ್ಟು 21 ಅಭ್ಯರ್ಥಿಗಳ ಹೆಸರಿದೆ. ಈ ಹಿಂದೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 67 ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿತ್ತು.
ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಎದುರು ಜುಲಾನಾದಿಂದ ಪಕ್ಷದ ಯುವ ನಾಯಕ ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಕಣಕ್ಕಿಳಿಸಲಾಗಿದೆ. ಗಣೂರಿನ ಬಿಜೆಪಿ ಹಾಲಿ ಶಾಸಕ ನಿರ್ಮಲ್ ರಾಣಿ ಅವರಿಗೆ ಪಕ್ಷ ಟಿಕೆಟ್ ನೀಡದೆ, ದೇವೇಂದ್ರ ಕೌಶಿಕ್ ಅವರಿಗೆ ಟಿಕೆಟ್ ನೀಡಲಾಗಿದೆ.
ರಾಯ್ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬಡೋಲಿ ಅವರಿಗೆ ಟಿಕೆಟ್ ನೀಡಿಲ್ಲ, ಬದಲಿಗೆ ಕೃಷ್ಣ ಗೆಹ್ಲಾವತ್ ಅವರನ್ನ ಕಣಕ್ಕಿಳಿಸಲಾಗಿದೆ. ಪಟೌಡಿಯ ಹಾಲಿ ಬಿಜೆಪಿ ಶಾಸಕ ಸತ್ಯ ಪ್ರಕಾಶ್ ಅವರನ್ನು ಕಡೆಗಣಿಸಿ ಬಿಮ್ಲಾ ಚೌಧರಿ ಟಿಕೆಟ್ ಪಡೆದಿದ್ದಾರೆ. ಇದಲ್ಲದೇ ಬಡಕಲ್‌ನ ಬಿಜೆಪಿಯ ಹಾಲಿ ಶಾಸಕಿ ಸೀಮಾ ತ್ರಿಖಾ ಅವರ ಟಿಕೆಟ್ ಕಡಿತಗೊಂಡಿದ್ದು, ಅವರ ಸ್ಥಾನದಲ್ಲಿ ಧನೇಶ್ ಅಧಾಲಖಾ ಬಡಕಲ್ ಅವರನ್ನು ಕಣಕ್ಕಿಳಿಸಲಾಗಿದೆ.
“ಮೀಸಲಾತಿ ಯಾವಾಗ ರದ್ದುಪಡಿಸುತ್ತೇವೆ…” : ‘ರಾಹುಲ್ ಗಾಂಧಿ’ ವಿರುದ್ಧ ‘ಮಾಯಾವತಿ’ ವಾಗ್ದಾಳಿ
ಪತ್ನಿ ವಿಜಯಲಕ್ಷ್ಮಿ ಜೊತೆಗೆ ‘ಪ್ರಿಸನ್ ಕಾಲ್’ ನಲ್ಲಿ ಮಾತನಾಡಿದ ದರ್ಶನ್ : ತಪ್ಪಿನ ಅರಿವಾಗಿ ಭಾವುಕನಾದ ದಾಸ!
BREAKING : ‘SpaceX’ನ ಬಹುನಿರೀಕ್ಷಿತ ‘ಪೊಲಾರಿಸ್ ಡಾನ್ ಮಿಷನ್’ ಯಶಸ್ವಿ ಉಡಾವಣೆ |VIDEO