ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಸ್ರೇಲ್ ಮತ್ತು ಹಮಾಸ್ ನಡುವಿನ ಹೊಸ ಗಾಜಾ ಕದನ ವಿರಾಮ ಒಪ್ಪಂದದ ಭಾಗವಾಗಿ ಸೋಮವಾರ ಹಮಾಸ್ ಎಲ್ಲಾ 20 ಇಸ್ರೇಲಿ ಜೀವಂತ ಒತ್ತೆಯಾಳುಗಳನ್ನ ರೆಡ್ ಕ್ರಾಸ್’ಗೆ ಬಿಡುಗಡೆ ಮಾಡಿತು. ಒತ್ತೆಯಾಳುಗಳನ್ನ ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಯಿತು. ಮೊದಲ ಹಂತದಲ್ಲಿ, ಏಳು ಒತ್ತೆಯಾಳುಗಳನ್ನು ಬೆಳಿಗ್ಗೆ ಬಿಡುಗಡೆ ಮಾಡಲಾಯಿತು ಮತ್ತು ಎರಡನೇ ಹಂತದಲ್ಲಿ, ಇನ್ನೂ 13 ಜನರನ್ನು ಬಿಡುಗಡೆ ಮಾಡಲಾಯಿತು. ಎರಡು ವರ್ಷಗಳ ಮಾರಕ ಯುದ್ಧದ ನಂತರ ಅವರು ಮನೆಗೆ ಮರಳಲಿದ್ದಾರೆ. ಏತನ್ಮಧ್ಯೆ, ಕದನ ವಿರಾಮದ ಮಧ್ಯವರ್ತಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಜಾ ಶಾಂತಿ ಶೃಂಗಸಭೆಗಾಗಿ ಈಜಿಪ್ಟ್’ಗೆ ನಿಗದಿತ ಭೇಟಿ ನೀಡುವ ಮೊದಲು ಇಸ್ರೇಲ್’ಗೆ ಆಗಮಿಸಿದರು. ಅವರು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ.
“ಯುದ್ಧ ಮುಗಿದಿದೆ. ಇದು ಒಂದು ಉತ್ತಮ ದಿನ. ಇದು ಹೊಸ ಆರಂಭ” ಎಂದು ಟ್ರಂಪ್ ಕದನ ವಿರಾಮವನ್ನ ಸ್ವಾಗತಿಸಿದರು. ಹಮಾಸ್ ನಿಶ್ಯಸ್ತ್ರಗೊಳಿಸುವ ಯೋಜನೆಯನ್ನು ಅನುಸರಿಸುತ್ತದೆ ಎಂದರು.
BIG NEWS: ‘ಸಹಕಾರ ಸಂಘ’ಗಳೂ ‘ಭ್ರಷ್ಟಾಚಾರ ಕಾಯ್ದೆ’ ವ್ಯಾಪ್ತಿಗೆ ಬರುತ್ತವೆ: ಕರ್ನಾಟಕ ಹೈಕೋರ್ಟ್
BREAKING : ‘ಜೋಯಲ್, ಫಿಲಿಪ್ ಮತ್ತು ಪೀಟರ್ ಹೊವಿಟ್’ಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ