ಚಾಮರಾಜನಗರ : ಕಳೆದ ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಮಾದಪ್ಪನ ಬೆಟ್ಟದಲ್ಲಿ 5 ಹುಲಿಗಳಿಗೆ ವಿಷ ಉಣಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿತ್ತು, ಇದೀಗ ಆ ಮತ್ತೊಂದು ಘಟನೆ ವರದಿಯಾಗಿದ್ದು, ಮಾದಪ್ಪನ ಬೆಟ್ಟದಲ್ಲಿ ಹುಲಿಯ ಅರ್ಧ ಕಳೆಬರ ಪತ್ತೆ ಆಗಿರುವ ಘಟನೆ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದ ಪಚೆದೊಡ್ಡಿ ಗ್ರಾಮದ ಹತ್ತಿರ ಹುಲಿಯ ಅರ್ಧ ಕಳೆಬರಹ ಪತ್ತೆಯಾಗಿದೆ. ಹುಲಿಯ ಅರ್ಧ ಕಳೆಬರ ಹುದಗಿಸಿಟ್ಟಿದ್ದು ಪತ್ತೆಯಾಗಿದೆ. ಹುಲಿಯ ತಲೆ, ಭುಜ ಮುಂಗಾಲುಗಳು ಮಾತ್ರ ಪತ್ತೆಯಾಗಿದ್ದು, ಉಳಿದ ಭಾಗಗಳು ನಾಪತ್ತೆಯಾಗಿವೆ. ಈ ಕುರಿತು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಹುಲಿಯ ಕಳ್ಳ ಬೇಟೆ ಆಡಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ.
ಇನ್ನು ಹುಲಿ ನಿಗೂಢ ಸಾವಿನ ತನಿಖೆಗೆ ಈಶ್ವರ ಖಂಡ್ರೆ ಆದೇಶ ನೀಡಿದ್ದಾರೆ. ಪಿಸಿಸಿಎಫ್ ಸ್ಮಿತಾ ಬಿಜ್ಜುರು ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ. ಎಂಟು ದಿನಗಳಲ್ಲಿ ಘಟನೆ ಕುರಿತು ವರದಿ ಸಲ್ಲಿಸುವಂತೆ ಈಶ್ವರ ಖಂಡ್ರೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಹುಲಿ ಹಂತಕರನ್ನು ಪತ್ತೆ ಮಾಡಲು ಅರಣ್ಯ ಸಚಿವ ಸೂಚನೆ ನೀಡಿದ್ದಾರೆ ಪಚ್ಚೆದೊಡ್ಡಿ ಬಳಿ ಹುಲಿಯ ಅರ್ಧ ಕಳೆಬರ ಪತ್ತೆಯಾಗಿದೆ.