ಹುಬ್ಬಳ್ಳಿ : ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರೂ ಕೊಲೆ ಆರೋಪಿಗಳ ಕಾಲಿಗೆ ಪೊಲೀಸರಿಂದ ಫೈರಿಂಗ್ ನಡೆಸಿರುವ ಘಟನೆ ವರದಿಯಾಗಿದೆ. ಆರೋಪಿಗಳಾದ ಬಾಲರಾಜ್ ಹಾಗೂ ಮೊಹಮ್ಮದ್ ಶೇಕ್ ಕಾಲಿಗೆ ಗುಂಡೇಟು ತಗುಲಿದ್ದು, ಹುಬ್ಬಳ್ಳಿ ನಗರದ ಮಂಟೂರು ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.
ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್ ಇಬ್ಬರ ಮೇಲೆ ಫೈರಿಂಗ್ ನಡೆಸಿದ್ದಾರೆ. ಮಲ್ಲಿಕ್ ಜಾನ್ ಕೊಲೆ ಪ್ರಕರಣದ ಆರೋಪಿಗಳಾದ ಬಾಲರಾಜ ಹಾಗೂ ಶೇಖ್ ಪೊಲೀಸರ ಮೇಲೆ ಹಲ್ಲೆ ಮಾಡಿ ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್ಪೆಕ್ಟರ್ ಫೈರಿಂಗ್ ನಡೆಸಿದ್ದಾರೆ. ಶ್ಯಾಮ್ ಜಾಧವ್ ಗ್ಯಾಂಗ್ ನಲ್ಲಿ ಇಬ್ಬರು ಆರೋಪಿಗಳು ಗುರುತಿಸಿಕೊಂಡಿದ್ದಾರೆ ಘಟನೆಯಲ್ಲಿ ಪಿ ಐ ಎಸ್ ಆರ್ ನಾಯಕ್ ಸೇರಿದಂತೆ ಮೂವರು ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಪಿಐ ಎಸ್.ಆರ್ ನಾಯಕ್, ಪಿಸಿಗಳಾದ ಅಹಮದ್ ನೀಲಗಾರ, ಚಲವಾದಿಗೆ ಗಾಯಗಳಾಗಿವೆ. ಗಾಯಗೊಂಡ ಪೊಲೀಸರು ಮತ್ತು ಆರೋಪಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.








