ನವದೆಹಲಿ : ಹಲ್ಗಾಮ್ ಉಗ್ರರ ದಾಳಿಯ ಪ್ರತೀಕಾರವಾಗಿ ನೆನ್ನೆ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಕ್ಯಾಂಪ್ ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಈ ಒಂದು ದಾಳಿಯಲ್ಲಿ ನೂರಕ್ಕೂ ಅಧಿಕ ಉಗ್ರರು ಸಾವನಪ್ಪಿದ್ದಾರೆ.ಇದೀಗ ಭಾರತದ ಏರ್ ಸ್ಟ್ರೈಕ್ ಹೊಡೆತಕ್ಕೆ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜಾಮಿಯಾ ಮಸೀದಿಯ ಗುಂಬಜವೇ ಇದೀಗ ಮಾಯವಾಗಿದೆ.
ಹೌದು ನಿನ್ನೆ ತಡರಾತ್ರಿ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು ಈ ಒಂದು ದಾಳಿಯಲ್ಲಿ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜಾಮಿಯಾ ಮಸೀದಿಯ ಗುಂಬಜವೇ ಇದೀಗ ಮಾಯವಾಗಿದೆ. ದಾಳಿಗೂ ಮುನ್ನ ಹಸಿರಿನಿಂದ ಕೂಡಿದ್ದ ಮಸೀದಿ ಏರ್ ಸ್ಟ್ರೈಕ್ ನಲ್ಲಿ ಸುಟ್ಟು ಕರಕಲಾಗಿದೆ.
ಅಲ್ಲದೇ ಉಗ್ರರ ನೆಲೆಗಳ ಮೇಲೆ ಭಾರತದ ಸೇನೆ ದಾಳಿ ನಡೆಸಿದ್ದು JEM ಕೇಂದ್ರ ಕಚೇರಿ ಕೂಡ ದ್ವಂಸವಾಗಿದೆ. ಬಹವಾಲ್ಪುರದ ಮಾರ್ಕರ್ ಸುಭಾನಲ್ಲ ಕಚೇರಿ ಮಿರಿ ಮಿರಿ ಮಿಂಚುತ್ತಿದ್ದ ಕಟ್ಟಡ ಸಂಪೂರ್ಣ ಇದೀಗ ನೆಲ ಸಮವಾಗಿದೆ ಮಿಸ್ಸೇಲ್ ಹೊಡೆತಕ್ಕೆ ಗೋಡೆ ಕಾಂಕ್ರೀಟ್ ಕಿತ್ತು ಬಂದಿದೆ.
#WATCH | Satellite pics from Maxar Technologies show damage caused by Indian missile strikes on Jamia Mosque in Bahawalpur and the city of Muridke, Pakistan, before and after the strike.
(Source: Reuters) pic.twitter.com/6idaYwwjOW
— ANI (@ANI) May 8, 2025