ಭುಜ್: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್ (ISIS) ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಉಗ್ರಗಾಮಿ ವಿಚಾರಧಾರೆ ಹಾಗೂ ‘ಜಿಹಾದ್’ ಕುರಿತಾದ ಅಂಶಗಳನ್ನು ಹರಡುತ್ತಿದ್ದ ಎಂದು ತಿಳಿದುಬಂದಿದೆ.
ಗುಜರಾತ್ ಭಯೋತ್ಪಾದನಾ ವಿರೋಧಿ ದಳ (ATS) ನೀಡಿದ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತ ಆರೋಪಿಯು ಕಳೆದ ಹಲವು ಸಮಯದಿಂದ ಗುಪ್ತಚರ ಇಲಾಖೆಯ ಕಣ್ಣಪ್ಪಿನಲ್ಲಿದ್ದ. ಈತ ಯುವಕರನ್ನು ಉಗ್ರಗಾಮಿ ಚಟುವಟಿಕೆಗಳತ್ತ ಸೆಳೆಯಲು ಪ್ರಯತ್ನಿಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಕಲಿ ಸಾಮಾಜಿಕ ಜಾಲತಾಣ ಖಾತೆಗಳು: ಆರೋಪಿಯು ತನ್ನ ಗುರುತನ್ನು ಮರೆಮಾಚಲು ಹತ್ತಾರು ಫೇಸ್‌ಬುಕ್, ಟೆಲಿಗ್ರಾಮ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬಳಸುತ್ತಿದ್ದ.ಈ ಖಾತೆಗಳ ಮೂಲಕ ಐಸಿಸ್ ಸಂಘಟನೆಯ ವಿಡಿಯೋಗಳು, ಪ್ರಚೋದನಕಾರಿ ಭಾಷಣಗಳು ಮತ್ತು ಜಿಹಾದ್ ಕುರಿತಾದ ಸಾಹಿತ್ಯವನ್ನು ಹರಡುತ್ತಿದ್ದ.
ಸ್ಥಳೀಯ ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ದೇಶವಿರೋಧಿ ಕೃತ್ಯಗಳಿಗೆ ಪ್ರಚೋದಿಸಲು ಈತ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.








