ಗದಗ : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಂಗಿಯನ್ನು ಅಣ್ಣನೊಬ್ಬ ಭೀಕರವಾಗಿ ಕೊಂದು ಠಾಣೆಗೆ ಬಂದು ಶರಣಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.
ಮುಂಡರಗಿ ಪಟ್ಟಣದ ಅನ್ನದಾನೀಶ್ವರ ನಗರದ ಖುರ್ಷಿದಾ (35) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ.ಮೃತ ಮಹಿಳೆ 14 ವರ್ಷದ ಹಿಂದೆ ಕಟಿಂಗ್ ಸಲೂನ್ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ 2020 ರಲ್ಲಿ ಮೈಬೂಬ್ ಬೆಟಗೇರಿ ಎಂಬಾತನ ಜೊತೆ ಎರಡನೇ ಮದುವೆಯಾಗಿ ಜೀವನ ನಿರ್ವಹಣೆಗಾಗಿ ಅಣ್ಣನ 15 ಎಕರೆ ಜಮೀನಿನಲ್ಲಿ ಪಾಲು ಕೇಳಿದ್ದ ಖುರ್ಷಿದಾ, ಕೋರ್ಟ್ ಮೆಟ್ಟಿಲೇರಿದ್ದಳು.
ಈ ಹಿನ್ನಲೆ ಇಂದು ಮನೆಗೆ ಬಂದು ಕೇಸ್ ವಾಪಸ್ ಪಡೆಯವಂತೆ ಅಣ್ಣ ಒತ್ತಾಯ ಮಾಡಿದ್ದಾನೆ. ಆದರೆ, ಅಣ್ಣನ ಮಾತು ಕೇಳದೆ ವಾಗ್ವಾದಕ್ಕಿಳಿದಿದ್ದ ತಂಗಿಯನ್ನು ಸಿಕ್ಕ ಸಿಕ್ಕಲ್ಲಿ ಮನಬಂದಂತೆ ಚಾಕು ಇರಿದು ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ತಾನೇ ಮುಂಡರಗಿ ಠಾಣೆಗೆ ಬಂದು ಶರಣಾಗಿದ್ದಾನೆ . ಸದ್ಯ ಸ್ಥಳಕ್ಕೆ ಗದಗ ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ ಹಾಗೂ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.